ಇಂಗ್ಲೆಂಡ್‍ನಲ್ಲೊಂದು ಮಿನಿ ಜಪಾನ್…!

ಈ ಸುದ್ದಿಯನ್ನು ಶೇರ್ ಮಾಡಿ

DS

ಇಂಗ್ಲೆಂಡ್‍ನಲ್ಲೊಂದು ಪುಟ್ಟ ಜಪಾನ್ ತಲೆ ಎತ್ತಿದೆ. ಅಶ್ಚರ್ಯವಾಗುತ್ತಿದಯೇ..? ಲಂಡನ್‍ನ ಸಾಂಸ್ಕøತಿಕ ಕೇಂದ್ರವೊಂದರಲ್ಲಿ ಜಪಾನಿನ ಸರ್ವವಸ್ತು ಭಂಡಾರವೇ ಅನಾ ವರಣಗೊಂಡಿದೆ. ಬನ್ನಿ ಅಲ್ಲಿಗೆ ನಾವೂ ಭೇಟಿ ನೀಡೋಣ..! ಯುನೈಟೆಡ್ ಕಿಂಗ್‍ಡಮ್ ರಾಜಧಾನಿ ಲಂಡನ್‍ನಲ್ಲಿ ಕಳೆದ ವಾರ ಸಾರ್ವಜನಿಕರಿಗಾಗಿ ಪ್ರಾರಂಭವಾದ ಜಪಾನ್ ಹೌಸ್ ಉದಯ ರವಿ ನಾಡಿನ ರುಚಿ-ಅಭಿರುಚಿಯ ಹೊಸ ಸಾಂಸ್ಕøತಿಕ ಕೇಂದ್ರವಾಗಿದೆ. ಬೊನ್ಸಾಯಿ ಮರದಿಂದ ಹಿಡಿದು ತಾಜಾ ತಯಾರಿಕೆ ಶುಶಿವರೆಗೆ ಇಲ್ಲಿ ಎಲ್ಲವೂ ಲಭ್ಯ. ಇದೊಂದು ಜಪಾನಿನ ಸರ್ವ ವಸ್ತು ಭಂಡಾರ ಎನಿಸಿದೆ. ಜಪಾನಿನ ಆಹಾರ, ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ಎಲ್ಲವೂ ಒಂದೇ ಸೂರಿನಡಿ ಲಭ್ಯ.

DS-2 DS-3

ಇಲ್ಲಿ ನೈಲ್ ಕ್ಲಿಪರ್‍ಗಳು, ಸಾಂಪ್ರದಾಯಿಕ ಟೀ ಕಪ್‍ಗಳು ಮತ್ತು ಜಪಾನಿ ಪೈಂಟ್‍ಬ್ರಷ್‍ಗಳು 100 ಪೌಂಡ್‍ಗಳಿಗೆ ದೊರೆಯುತ್ತದೆ.  ಮೂರು ಅಂತಸ್ತುಗಳ ಜಪಾನ್ ಹೌಸ್‍ನಲ್ಲಿ ವಸ್ತು ಪ್ರದರ್ಶನಕ್ಕೆ ಸ್ಥಳಾವಕಾಶ ಇದೆ. ಇದರಲ್ಲಿ ಜಪಾನ್ ವಾಸ್ತುಶಿಲ್ಪಿ ಸುಯು ಫುಜಿಮೊಟೊ ಅವರ ಶಿಲ್ಪ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ಮೇಲಿನ ಮಹಡಿಯಲ್ಲಿ ರೆಸ್ಟೋರೆಂಟ್ ಇದೆ. ಅಲ್ಲಿ ಜಪಾನಿ ಬಾಣಸಿಗ ಅಕಿರಾ ಶಿಮಿಜು ಸೃಷ್ಟಿಸುವ ಪ್ರಸಿದ್ಧ ಆಹಾರ ಶುಶಿ ಮತ್ತು ಸೇಕ್ ರುಚಿ ನೋಡಬಹುದು.
ಇಲ್ಲಿ ಸಾಂಪ್ರದಾಯಿಕ ಜಪಾನಿ ಚಹಾ ಕೊಠಡಿ- ಟೊಕೊನೊಮಾ ಸಹ ಇದ್ದು, ಅಲ್ಲಿ ಅತಿಥಿಗಳಿಗೆ ಮನರಂಜನೆ ನೀಡುವ ಕಲಾತ್ಮಕ ವಸ್ತುಗಳಿವೆ ಎನ್ನುತ್ತಾರೆ ಒಳಾಂಗಣ ವಿನ್ಯಾಸಗಾರ ಕಟಯಾಮಾ ಮೊಸಮಿಚಿ. ಇದು ಇಂಗ್ಲೆಂಡ್‍ನಲ್ಲಿರುವ ಜಪಾನಿನ ಸೃಜನಾತ್ಮಕತೆ, ಅನ್ವೇಷಣೆ ಮತ್ತು ವಾಣಿಜ್ಯ ಕೇಂದ್ರ, ಬ್ರಿಟನ್‍ನಲ್ಲಿ 1,000ಕ್ಕೂ ಹೆಚ್ಚು ಜಪಾನಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

DS-1

Facebook Comments

Sri Raghav

Admin