ಇಂದಿನ ಪಂಚಾಗ ಮತ್ತು ರಾಶಿಫಲ (24-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದುರ್ಜನಸಂಗ ಆರಂಭದಲ್ಲಿ ಮಧುರ. ವಯಸ್ಸು ನಡುವೆ ತಾರಣ್ಯದಲ್ಲಿ ಮಧುರ. ಬೇಸಿಗೆ ದಿನ ಕಡೆಯಲ್ಲಿ-ಸಂಜೆ ಮಧುರ. ಸಜ್ಜನ ಸಂಗವು ಆರಂಭ-ನಡುವೆ-ಕಡೆಯಲ್ಲಿಯೂ ಒಂದೇ ರೀತಿ ಮಧುರ. -ಸಮಯೋಚಿತಪದ್ಯಮಾಲಿಕಾ

Rashi

ಪಂಚಾಂಗ : 24.07.2018 ಮಂಗಳವಾರ
ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಸಂ.04.07 / ಚಂದ್ರ ಅಸ್ತ ರಾ.03.50
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ದ್ವಾದಶಿ (ಸಾ.06.26)
ನಕ್ಷತ್ರ: ಜ್ಯೇಷ್ಠಾ (ಮ.03.28)/ ಯೋಗ: ಬ್ರಹ್ಮ (ಬೆ.08.00)
ಕರಣ: ಬಾಲವ (ಸಾ.06.26) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 09

ಇಂದಿನ ವಿಶೇಷ:

ರಾಶಿ ಭವಿಷ್ಯ : 

ಮೇಷ : ಭೂಮಿ, ವ್ಯಾಪಾರ-ವ್ಯವಹಾರದಲ್ಲಿ ಲಾಭ ಕಾಣುವಿರಿ. ಸಜ್ಜನರ ಸಹವಾಸ ಮಾಡುವಿರಿ
ವೃಷಭ : ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ
ಮಿಥುನ: ರಾಜಕೀಯ ವ್ಯಕ್ತಿಗಳಿಂದ ಸಹಾಯ ದೊರೆ ಯುತ್ತದೆ. ಪ್ರಗತಿಗೆ ಅನೇಕ ಅವಕಾಶಗಳು ದೊರೆಯುತ್ತವೆ
ಕಟಕ : ಬಂಧು-ಮಿತ್ರರಿಂದ ಅಡ್ಡಿ-ಆತಂಕಗಳು ಬರಲಿವೆ
ಸಿಂಹ: ನಿಮಗೆ ಎದುರಾಗುವ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ
ಕನ್ಯಾ: ಹಣಕಾಸಿನ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತವೆ
ತುಲಾ: ವಾಹನದಿಂದ ಅಪ ಘಾತವಾಗುವ ಸಾಧ್ಯತೆಗಳಿವೆ
ವೃಶ್ಚಿಕ: ವಿದ್ಯಾರ್ಥಿಗಳು ಓದಿ ನಲ್ಲಿ ನಿರ್ಲಕ್ಷ್ಯ ತೋರುವರು
ಧನುಸ್ಸು: ಬಟ್ಟೆ ವ್ಯಾಪಾರಿಗಳಿಗೆ ಆಮದು ಮತ್ತು ರಫ್ತು ವ್ಯವಹಾರದಲ್ಲಿ ನಷ್ಟ ಉಂಟಾಗಲಿದೆ
ಮಕರ: ತಾಯಿಯ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಸಮಾಜ ಸೇವಕರಿಗೆ ಉತ್ತಮ ದಿನ
ಕುಂಭ: ಅವಿವಾಹಿತರಿಗೆ ವಿವಾಹ ಯೋಗ
ಮೀನ: ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin