ರಾಹುಲ್‍ ಗಾಂಧಿಯನ್ನು ಟೀಕಿಸಿದ್ದಕ್ಕೆ ತ್ರಿಪಾಠಿ ಪಕ್ಷದಿಂದ ಔಟ್

ಈ ಸುದ್ದಿಯನ್ನು ಶೇರ್ ಮಾಡಿ

Tripati--01

ಪಾಟ್ನಾ,ಜು.24- ಸಂಸತ್ ಕಲಾಪದಲ್ಲೇ ಪ್ರಧಾನಿ ನರೇಂದ್ರ ಮೋದಿಯನ್ನು ಆಲಿಂಗಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದ ಆರ್‍ಜೆಡಿ ರಾಷ್ಟ್ರೀಯ ವಕ್ತಾರ ಶಂಕರ್ ಚರಣ್ ತ್ರಿಪಾಠಿ ಅವರನ್ನು ಪಕ್ಷದಿಂದ ವಜಾ ಗೊಳಿಸಲಾಗಿದೆ.  ಆರ್‍ಜೆಡಿಡಿ ಪ್ರಧಾನ ಕಾರ್ಯದರ್ಶಿ ಖಾಮರ್ ಆಲಮ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಕಾರಣಕ್ಕಾಗಿ ತ್ರಿಪಾಠಿ ಅವರನ್ನು ಹುದ್ದೆಯಿಂದ ವಜಾ ಮಾಡಿರುವುದಾಗಿ ತಿಳಿಸಿದ್ದಾರೆ. ರಾಹುಲ್ ಅವರು ಮಕ್ಕಳಂತೆ ವರ್ತಿಸಿದ್ದಾರೆ. ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ವ್ಯಕ್ತಿ ಈ ರೀತಿ ವರ್ತಿಸಬಾರದು ಎಂದು ತ್ರಿಪಾಠಿ ಟೀಕಿಸಿದ್ದರು.

ಆರ್‍ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಲೋಕಸಭಾ ಚುನಾವಣೆ ಎದುರಿಸುವ ಸಿದ್ಧತೆಗಳನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ತ್ರಿಪಾಠಿಯವರು ಕಲಾಪದಲ್ಲಿ ಪ್ರಧಾನಿ ಮೋದಿಯವರನ್ನು ರಾಹುಲ್ ಆಲಿಂಗಿಸಿರುವುದನ್ನು ಟೀಕಿಸಿದ್ದು, ಈ ನಡೆ ಪಕ್ಷ ವಿರೋಧಿ ಚಟುವಟಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin