ನೀರಿಲ್ಲದ ಬಾವಿಗೆ ಬಿದ್ದ ಜಿಂಕೆ ರಕ್ಷಣೆ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

tank

ಚಿಂತಾಮಣಿ, ಜು.24-ತಾಲೂಕಿನ ಮುಂತಕದಿರೇನಹಳ್ಳಿಯಲ್ಲಿ ನೀರಿಲ್ಲದ ಬಾವಿಗೆ ಬಿದ್ದ ಜಿಂಕೆಯನ್ನು ಅರಣ್ಯ ಇಲಾಖೆಯವರು ಸಾರ್ವಜನಿಕರ ಸಹಕಾರದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂತಕದಿರೇನಹಳ್ಳಿ ಸಮೀಪದ ನಗರಸಭಾ ಸದಸ್ಯ ಜಿಯಾವುರ್ ರೆಹಮಾನ್ ರವರಿಗೆ ಸೇರಿದ ಜಮೀನಿನಲ್ಲಿರುವ ತೆರೆದ ನೀರಿಲ್ಲದ ಕಲ್ಲು ಕಟ್ಟಡದ ಬಾವಿಗೆ ಜಿಂಕೆ ಬಿದ್ದಿದ್ದು ಬಾವಿಯಿಂದ ಶಬ್ಧ ಕೇಳಿಸಿಕೊಂಡ ಸುತ್ತಮುತ್ತಲಿನ ತೋಟದವರು ಕಂಡು ಗ್ರಾಮದ ಮುಖಂಡರಿಗೆ ತಿಳಿಸಿದ್ದಾರೆ.
ಗ್ರಾಮದ ಮುಖಂಡರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು ಕೂಡಲೇ ಅರಣ್ಯ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಜಯಚಂದ್ರ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ನೆರವಿನೊಂದಿಗೆ ಬಾವಿಯಲ್ಲಿ ಬಿದ್ದಿದ್ದ ಒಂದು ವರ್ಷದ ಕೃಷ್ಣಮೃಗ ಜಿಂಕೆಯನ್ನು ಮೇಲಕ್ಕೆ ಎತ್ತಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ತಾಲೂಕಿನ ಕೈವಾರದ ಅರಣ್ಯದ ತಪೋವನದಲ್ಲಿರುವ ಜಿಂಕೆಗಳ ಜೊತೆ ಬಿಟ್ಟಿದ್ದಾರೆ.

Facebook Comments

Sri Raghav

Admin