ಎಳೆನೀರು ಸರ್ವಕಾಲದಲ್ಲೂ ಅರೋಗ್ಯಕರ ಪಾನೀಯ..!

ಈ ಸುದ್ದಿಯನ್ನು ಶೇರ್ ಮಾಡಿ

Coconut-weter

ಎಳೆನೀರು ಅಮೃತದ ಪ್ರತಿರೂಪ ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಹೆಚ್ಚದಾಗ ಜನರು ತಂಪು ಪಾನೀಯಗಳ ಮೊರೆ ಹೋಗುವುದು ಸಹಜ. ಆದರೆ ಆರೋಗ್ಯದ ದೃಷ್ಟಿಯಿಂದ ಎಳನೀರಿನ ಸೇವನೆ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೇ ತಿಳಿದಿರುವ ವಿಷಯ. ಎಳೆನೀರು ಗಂಗೆಯ ಮತ್ತೊಂದು ರೂಪ ಎಂದು ನಂಬುವವರು ಸಾಕಷ್ಟು ಜನರಿದ್ದಾರೆ. ಸಿಕ್ಕಾಪಟ್ಟೆ ಬಾಯಾರಿಕೆ ಆದಾಗ ನೀರಿನ ಬದಲಾಗಿ ಎಳೆನೀರನ್ನು ಸೇವಿಸಿದರೆ ಉತ್ತಮ, ಎಷ್ಟೇ ಬಾಯಾರಿಕೆ ಇದ್ದರು ಒಂದೇ ಒಂದು ಎಳೆನೀರು ಬಾಯಾರಿಕೆಯನ್ನು ದೂರ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ ತುಂಬಾ ಹೆಚ್ಚು. ಅದರಿಂದ ದೂರವಾಗಲು ತಂಪು ಪಾನಿಯಗಳತ್ತ ಗಮನ ನೀಡದೆ ಎಳೆನೀರು ಕುಡಿಯಿರಿ ಎನ್ನುತ್ತಾರೆ ತಜ್ಞರು. ಜೊತೆಗೆ ಪ್ರತಿ ದಿನ ಎಳೆನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಸಾಕಷ್ಟು ಸಮಸ್ಯೆಗಳನ್ನು ದೂರವಿರಿಸಬಹುದು ಎಂಬುದು ಸಾರ್ವಕಾಲಿಕ ಗುಟ್ಟು.

Coconut-weter-1

ಎಳೆನೀರಿನಲ್ಲಿ ಎಲೆಕ್ಟ್ರೋ ಲೈಟ್ಸ್ ಕ್ಯಾಲ್ಸಿಯಂ, ಪೊಟಾಷಿಯಂ, ಮೆಗ್ನಿಶಿಯಂ ನಂತಹ ಖನಿಜ ಲವಣಗಳಿವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ.ರೋಗಿಯು ಟೈಪಾಯಿಡ್ ಮಲೆರಿಯದಂತಹ ಜ್ವರಕ್ಕೆ ಈಡಾಗಿದ್ದರೆ, ವಾಂತಿ ನಿರೋಧಕ, ಕಿಡ್ನಿಯಲ್ಲಿ ಕಲ್ಲು ಇರುವವರು ತಪ್ಪದೆ ಎಳೆ ನೀರು ಕುಡಿಯಿರಿ. ಅದು ಈ ಸಮಸ್ಯೆಯನ್ನು ದೂರಮಾಡುತ್ತದೆ

ಕುಡಿದ ಹಾಲನ್ನು ಕಕ್ಕುವ ಮಕ್ಕಳಿಗೆ ಹಾಲಿನೊಂದಿಗೆ ಸ್ವಲ್ಪ ಎಳನೀರು ಬೆರೆಸಿ ಕೊಟ್ಟರೆ ವಾಂತಿಯಾಗುವುದಿಲ್ಲ ಮತ್ತು ಚೆನ್ನಾಗಿ ಜೀರ್ಣಿಸಿ ದೇಹಗತವಾಗುತ್ತದೆ.
ಹಸಿ ತೆಂಗಿನ ತುರಿಯನ್ನು ಒಂದು ಬಟ್ಟಲು ಎಳನೀರಿ ನೊಂದಿಗೆ ನುಣ್ಣಗೆ ರುಬ್ಬಿ ಕಲ್ಲು ಸಕ್ಕರೆ ಮತ್ತು ಏಲಕ್ಕಿ ಸೇರಿಸಿ ದಿನಕ್ಕೆ ಒಂದು ಬಾರಿ ಸೇವಿಸಿದರೆ ಎದೆನೋವು, ಪುಪ್ಪುಸ ನಳಿಕಾದಾಹ, ಬಿಕ್ಕಳಿಕೆ, ನಿದ್ರಾನಾಶ, ಹೊಟ್ಟೆ ಹುಣ್ಣು ಗುಣಮುಖವಾಗುತ್ತವೆ.

Coconut-weter-2

ಒಂದು ಬಟ್ಟಲು ಎಳನೀರಿಗೆ ಮೂರು-ನಾಲ್ಕು ಚಿಟಿಕೆ ಏಲಕ್ಕಿ ಚೂರ್ಣ ಮತ್ತು ಎರಡು ಊಟದ ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ವಾಂತಿ ನಿಲ್ಲುತ್ತದೆ. ಈ ಉಪಚಾರವನ್ನು ದಿನಕ್ಕೆ ಮೂರು ಬಾರಿ ಎರಡರಿಂದ ಮೂರು ದಿನಗಳ ತನಕ ಮುಂದುವರಿಸ ಬೇಕಾಗುತ್ತದೆ.

ಸಾಂಕ್ರಾಮಿಕ ರೋಗಗಳಿಂದ ನರಳುವ ರೋಗಿಗಳಿಗೆ ನೀರನ್ನು ಅಗತ್ಯವಾಗಿ ಕೊಡಬೇಕು. ಔಷಧಿ ಬೇಗ ಮೈ ಹಿಡಿದು, ರೋಗ ಶೀಘ್ರ ನಿವಾರಣೆಯಾಗುತ್ತದೆ.
ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಎಳನೀರನ್ನು ಚೆನ್ನಾಗಿ ಕಿವುಚಿ ಮಕ್ಕಳಿಗೆ ಕುಡಿಸಬಹುದು. ಇದು ಹಾಲಿಗೆ ಸಮನಾದ ಆಹಾರ. ಎಳನೀರಿನ ಒಳಗಿರುವ ದೋಸೆಯಂತಹ ತಿರುಳನ್ನು ಕಳಿತ ಬಾಳೆಹಣ್ಣಿನೊಂದಿಗೆ ಮಸೆದು ಹಾಲಿನೊಂದಿಗೆ ಸೇರಿಸಿ ಸೇವಿಸಿದರೆ ಸುಲಭವಾಗಿ ಜೀರ್ಣವಾಗುತ್ತದೆ. ಆ ಆಹಾರವನ್ನು ಮಕ್ಕಳಿಗೆ, ಜೀರ್ಣಾಂಗಗಳಿಗೆ ಸಂಬಂಧಿಸಿದ ರೋಗಗಳಿಂದ ನರಳುವವರಿಗೂ ಕೊಡಬಹುದು. ಇದು ಶಕ್ತಿದಾಯಕ ಆಹಾರ. ವಯೋವೃದ್ಧರಿಗೆ ತೆಂಗಿನಹಾಲನ್ನು ಎಳನೀರಿ ನೊಂದಿಗೆ ಮಿಶ್ರ ಮಾಡಿ ನೀಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಇದು ಅತ್ಯಮೂಲ್ಯವಾದ ದ್ರವರೂಪದ ಆಹಾರ. ಈ ಆಹಾರವನ್ನು ಮಕ್ಕಳಿಗೂ ನೀಡಬಹುದು.

Facebook Comments

Sri Raghav

Admin