ಕಣ್ಮನ ಸೆಳೆಯುತ್ತಿದೆ ಕಾಫಿ ನಾಡು, ಪ್ರಕೃತಿ ಸೌಂದರ್ಯ ಸವಿಯಲು ಸಾಲದೆರಡುಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

rain-Chikkamagaluru
ಚಿಕ್ಕಮಗಳೂರು, ಜು.24- ಎತ್ತ ನೋಡಿದರೆತ್ತ ಜಲಲ… ಜಲಲ… ಜಲಧಾರೆ… ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಾಫಿ ನಾಡು… ಈ ಪ್ರಕೃತಿ ಸೌಂದರ್ಯ ಸವಿಯಲು ಎರಡು ಕಣ್ಣುಗಳು ಸಾಲವು ಎಂದರೆ ತಪ್ಪಾಗಲಾರದು.  ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪಶ್ಚಿಮ ಘಟ್ಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಜಲಪಾತಗಳು ತುಂಬಿ ಹರಿಯುತ್ತಿದ್ದು, ಹಳ್ಳ-ಕೊಳ್ಳಗಳೂ ಸಹ ನೀರಿನಿಂದ ಕಂಗೊಳಿಸುತ್ತಿವೆ.
ತುಂಗಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿರುವುದು ಒಂದು ಕಡೆಯಾದರೆ ಮಳೆಯಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದ್ದು, ಜಿಟಿ ಜಿಟಿ ಮಳೆಯಲ್ಲೂ ಸಹ ಭತ್ತ ನಾಟಿಯಲ್ಲಿ ರೈತರು ತಲ್ಲೀನರಾಗಿದ್ದಾರೆ.

rain-Chikkamagaluru-2

ಜುಲೈ 23ರ ವರೆಗೆ ವಾಡಿಕೆಯಂತೆ 6.675 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಈವರೆಗೆ ಅಗತ್ಯಕ್ಕಿಂತ ಹೆಚ್ಚು ಅಂದರೆ 10.576.1 ಮಿಲಿ ಮೀಟರ್ ಮಳೆಯಾಗಿದೆ. ಶೇಕಡಾವಾರು ನೋಡಿದರೆ 158.4 ಮಿಲಿ ಮೀಟರ್ ಮಳೆಯಾಗಿದೆ. ಮಳೆಯ ಮೋಜು ಹಾಗೂ ರಮಣೀಯ ದೃಶ್ಯಗಳನ್ನು ಸವಿಯಲು ಪ್ರವಾಸಿಗರ ದಂಡೇ ಕಾಫಿ ನಾಡಿನತ್ತ ಹರಿದು ಬರುತ್ತಿದೆ. ಮತ್ತೊಂದೆಡೆ ಅಭಯಾರಣ್ಯ ಪರ್ವತ ಶ್ರೇಣಿಯಾದ ಬಾಬಾ ಬುಡನ್‍ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಫಾಲ್ಸ್ ಪ್ರದೇಶಗಳಿಗೆ ಭೇಟಿ ನೀಡಿದರೆ ವಾಪಸ್ ಬರಲು ಮನಸ್ಸೇ ಆಗುವುದಿಲ್ಲ. ಆ ರೀತಿ ಕಂಗೊಳಿಸುತ್ತಿದೆ.
ನಿಜ ಹೇಳಬೇಕೆಂದರೆ, ನಿಸರ್ಗದ ನಿಜವಾದ ಸ್ವರ್ಗವೇ ಕಾಫಿ ನಾಡಿನಲ್ಲಿ ಇದೆಯೆಂದು ಪ್ರವಾಸಿಗರು ತಮ್ಮ ಮನದಾಳದ ಮಾತುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

rain-Chikkamagaluru-3 rain-Chikkamagaluru-1 rain-Chikkamagaluru-4

Facebook Comments