ಟ್ರಾಫಿಕ್ ರೂಲ್ಸ್ ಪಾಲಿಸದವರಿಗೆ ಬುದ್ದಿ ಹೇಳಿದ ಸಿದ್ದಿವಿನಾಯಕ..!

ಈ ಸುದ್ದಿಯನ್ನು ಶೇರ್ ಮಾಡಿ

Ganesh--01
ಬೆಂಗಳೂರು, ಜು.25- ರಾಜಾಜಿನಗರ ಸಂಚಾರ ಠಾಣೆ ಪೋಲೀಸರು ಇಂದು ಸಂಚಾರ ನಿಯಮ ಉಲಂಘಿಸಿದ ಸವಾರರು ಮತ್ತು ಚಾಲಕರಿಗೆ ಹೂವು ನೀಡುವ ಮೂಲಕ ವಿಶಿಷ್ಟವಾಗಿ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕ ರಲ್ಲಿ ಅರಿವು ಮೂಡಿಸಿದರು. ರಾಜಾಜಿನಗರದ ಪ್ರವೇಶದ್ವಾರದಲ್ಲಿ ಎಸಿಪಿ ಜಿ.ಎ.ಜಗದೀಶ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇನ್ಸ್‍ಪೆಕ್ಟರ್ ನರೇಂದ್ರ ಕುಮಾರ್, ಎಎಸ್‍ಐ ಶಿವರಾಮಯ್ಯ ಮತ್ತಿತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಹೆಲ್ಮೆಟ್ ಧರಿಸದ ಮತ್ತು ಸೀಟ್‍ಬೆಲ್ಟ್ ಹಾಕದ ಸವಾರರು ಮತ್ತು ಚಾಲಕರಿಗೆ ಗಣೇಶನ ವೇಷ ಧರಿಸಿದ್ದ ವ್ಯಕ್ತಿಯೊಬ್ಬರು ಹೂವುಗಳನ್ನು ನೀಡಿ, ಇನ್ನು ಮುಂದೆ ಸಂಚಾರ ನಿಯಮ ಪಾಲಿಸಿ ಎಂದು ಮನವಿ ಮಾಡಿದರು. ಧಾರ್ಮಿಕವಾಗಿ ಗಣೇಶ ಹೆಚ್ಚು ಪ್ರಸಿದ್ಧಿಯಾಗಿರುವ ದೇವರು. ಈ ಹಿನ್ನೆಲೆಯಲ್ಲಿ ಗಣೇಶನ ವೇಷಧರಿಸಿ ಸಂಚಾರ ನಿಯಮಗಳ ಬಗ್ಗೆ ಅರಿವುಮೂಡಿಸಲಾಗಿದೆ ಎಂದು ರಾಜಾಜಿನಗರ ಸಂಚಾರ ಠಾಣೆಯ ಇನ್ಸ್‍ಪೆಕ್ಟರ್ ನರೇಂದ್ರ ಕುಮಾರ್ ಈ ಸಂಜೆಗೆ ತಿಳಿಸಿದರು. ಇದೇ ವೇಳೆ ಸೈಂಟ್‍ಮಾಕ್ರ್ಸ್, ಪ್ರೆಸಿಡೆನ್ಸಿ ಮತ್ತು ಅಜಂಷನ್ ಶಾಲೆಗಳ ವಿದ್ಯಾರ್ಥಿಗಳು ಬ್ಯಾಂಡ್‍ನೊಂದಿಗೆ ಮೆರವಣಿಗೆ ನಡೆಸಿ, ಪೆÇಲೀಸರಿಗೆ ಸಾಥ್ ನೀಡಿದರು.

Facebook Comments

Sri Raghav

Admin