ಬಿಲ್ ಪಾವತಿಯಾಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ತಾಲ್ಲೂಕು ಗ್ರಾಮ ಪಂಚಾಯಿತಿ ಸದಸ್ಯ

ಈ ಸುದ್ದಿಯನ್ನು ಶೇರ್ ಮಾಡಿ

Poison--001

ಚಿಕ್ಕನಾಯಕನಹಳ್ಳಿ, ಜು.25- ಕೆಂಕೆರೆ ಗ್ರಾಮ ಪಂಚಾಯಿತಿ ಸದಸ್ಯ ಎನ್.ನಾಗರಾಜು (ಕಾಡಿನರಾಜ)ತಾಲ್ಲೂಕು ಪಂಚಾಯಿತಿ ಮುಂಭಾಗ ವಿಷ ಸೇವಿಸಿ ಆತ್ಮಹತ್ಯೆಗೆಯತ್ನಿಸಿರುವ ಘಟನೆ ನಡೆದಿದೆ. ಕೆಂಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬರದೆಲೆಪಾಳ್ಯದಲ್ಲಿ ವರ್ಷದ ಹಿಂದೆ ಎನ್‍ಆರ್‍ಇಜಿ ಯೋಜನೆ ಅಡಿಯಲ್ಲಿ 3 ಲಕ್ಷರೂ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದು, ವರ್ಷದಿಂದಲೂ ಬಿಲ್ಲು ಮಾಡಿಕೊಡುವಂತೆ ಅನೇಕ ಬಾರಿ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಏನು ಪ್ರಯೋಜನವಾಗಿಲ್ಲ. ಸಾಲ ಮಾಡಿ ಕಾಂಕ್ರಿಟ್ ರಸ್ತೆ ಮಾಡಿ ಒಂದು ವರ್ಷವಾದರೂ ಅಧಿಕಾರಿಗಳು ಹಣ ನೀಡುತ್ತಿಲ್ಲ ಎಂದು ಮನನೊಂದು ತಾಲ್ಲೂಕು ಪಂಚಾಯಿತಿ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲೇ ಇದ್ದ ಕೆಲವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಮಗಾರಿ ಮಾಡುವಾಗ ಸಂಬಂಧಪಟ್ಟ ಪಿಡಿಒಗಾಗಲಿ ಅಥವಾ ಇಂಜಿನಿಯರ್ ಗಮನಕ್ಕೆ ತರದೆ ಕಾಮಗಾರಿ ಮಾಡಿರುವುದು ಹಾಗೂ ಎನ್‍ಆರ್‍ಇಜಿ ನಿಯಾಮಾನುಸಾರ ಕೂಲಿ ಕಾರ್ಮಿಕರನ್ನು ತೆಗೆದುಕೊಂಡು ಕಾಮಗಾರಿ ಮಾಡದೇ ಯಂತ್ರೋಪಕರಣಗಳಿಂದ ಕಾಮಗಾರಿ ಮಾಡಿದ್ದಾರೆ ಎಂದು ಕೆಂಕೆರೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸದರಿ ಕಾಮಗಾರಿ ನಿಯಾಮಾನುಸಾರ ಮಾಡಿಲ್ಲ ಎಂದು ದೂರು ನೀಡಿದ್ದಾರೆ. ಇದರಿಂದ ಹೆದರಿದ ಪಿಡಿಒ ಎನ್‍ಎಮ್‍ಆರ್ ತೆಗೆದುಕೊಂಡಿಲ್ಲ. ಆದ್ದರಿಂದ ನಾನು ಬಿಲ್ಲು ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

Facebook Comments

Sri Raghav

Admin