ಮೊದಲ ತ್ರೈಮಾಸಿಕದಲ್ಲಿ ಶೇ.18.65 ರಷ್ಟು ಪ್ರಗತಿ ಸಾಧಿಸಿದ ಕೆನರಾ ಬ್ಯಾಂಕ್

ಈ ಸುದ್ದಿಯನ್ನು ಶೇರ್ ಮಾಡಿ

Canara-Bank--01

ಬೆಂಗಳೂರು, ಜು.25- ಪ್ರಸಕ್ತ ಸಾಲಿನ 2018-19 ರ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿರುವ ದೇಶದ ಪ್ರತಿಷ್ಠಿತ ಕೆನರಾ ಬ್ಯಾಂಕ್ ಶೇ.18.65 ರಷ್ಟು ಪ್ರಗತಿ ಕಂಡಿದೆ.  ಪತ್ರಿಕಾಗೋಷ್ಠಿಯಲ್ಲಿಂದು ಬ್ಯಾಂಕ್‍ನ ವಹಿವಾಟು ಪ್ರಕಟಿಸಿದ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‍ಶರ್ಮಾ, ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ನಮ್ಮ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದೆ, 2019ರ ಆರ್ಥಿಕ ವರ್ಷದ ಅಂತ್ಯಕ್ಕೆ ಹೊಸ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು. ಬ್ಯಾಂಕಿನ ವಹಿವಾಟು ಶೇ. 10.96 ರಷ್ಟು ಪ್ರಗತಿ ಸಾಧಿಸಿದೆ. ರೂ. 9.2 ಲಕ್ಷ ಕೋಟಿ ತಲುಪಿದೆ. ಹೂಡಿಕೆ, ಉಳಿತಾಯ ಖಾತೆ ಕೂಡ ಗಣನೀಯ ಏರಿಕೆ ಕಂಡಿದ್ದು, ಸಾಲ ವಸೂಲಾತಿಯಲ್ಲೂ ಒಳ್ಳೆಯ ಸಾಧನೆ ಮಾಡಿದ್ದೇವೆ ಎಂದು ರಾಕೇಶ್‍ಶರ್ಮಾ ತಿಳಿಸಿದರು.

Facebook Comments

Sri Raghav

Admin