ವಿಚ್ಚೇದಿತ ಪತ್ನಿಗೆ ಪತಿಯಿಂದ ‘ಚಿಲ್ಲರೆ’ ಪರಿಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

Wife--01

ಚಂಡೀಗಡ, ಜು.25- ವಕೀಲರೊಬ್ಬರು ತನ್ನ ವಿಚ್ಚೇದಿತ ಪತ್ನಿಗೆ ತಿಂಗಳ ಜೀವನಾಂಶವಾಗಿ 24,600 ರೂ. ಹಣವನ್ನು ನಾಣ್ಯದ (ಕಾಯಿನ್) ರೂಪದಲ್ಲಿ ನೀಡಿರುವ ವಿಲಕ್ಷಣ ಘಟನೆಗೆ ಚಂಡೀಗಡ ನ್ಯಾಯಾಲಯ ಸಾಕ್ಷಿಯಾಯಿತು. ಒಂದು ಮತ್ತು ಎರಡು ರೂಪಾಯಿ ಕಾಯಿನ್‍ಗಳನ್ನು ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪತ್ನಿ, ನ್ಯಾಯಾಲಯದಲ್ಲೇ ಗಂಡನಿಗೆ ಏರುಧ್ವನಿಯಲ್ಲಿ ಬೈದು, ನಾಣ್ಯ ನೀಡುವ ಮೂಲಕ ಪತಿ ನನಗೆ ಮತ್ತಷ್ಟು ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿದ್ದಾಳೆ.

ಬಳಿದ ಆತ 100 ರೂ.ಮುಖಬೆಲೆಯ ನಾಲ್ಕು ನೋಟುಗಳನ್ನು ನೀಡುವ ಮೂಲಕ ಬಾಕಿ ಹಣ ಪಾವತಿಸಿದ್ದಾನೆ. ನಾಣ್ಯಗಳನ್ನು ಎಣಿಸಲು ಸಾಕಷ್ಟು ಸಮಯಬೇಕಾಗುತ್ತದೆ ಎಂದು ಪತ್ನಿ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಹಣ ಎಣಿಸಲು ಜುಲೈ 27ರವರೆಗೆ ಕಾಲಾವಕಾಶ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಆ ದಿನಕ್ಕೆ ಮುಂದೂಡಿದೆ.

ಹರ್ಯಾಣ ಮತ್ತು ಪಂಜಾಬ್ ಹೈಕೋರ್ಟ್‍ಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ವಕೀಲ ಪತಿ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದಾರೆ. ಜೀವನಾಂಶವಾಗಿ ಪ್ರತಿ ತಿಂಗಳು 25000 ರೂ.ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಪತಿ ಸರಿಯಾಗಿ ಜೀವನಾಂಶ ನೀಡುತ್ತಿರಲಿಲ್ಲ. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ಆಗ ಪತಿ, ನನ್ನಲ್ಲಿ ಹಣವಿಲ್ಲ, ಬೇರೆಯವರಿಂದ ಸಾಲ ಪಡೆದಿದ್ದೇನೆ. ಅವೆಲ್ಲವೂ ನಾಣ್ಯದ ರೂಪದಲ್ಲಿದೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಪತಿಯ ವಾದವನ್ನು ಒಪ್ಪದ ಪತ್ನಿ, ನಾಣ್ಯ ನೀಡುವ ಮೂಲಕ ನನಗೆ ಮತ್ತಷ್ಟು ಕಿರುಕುಳ ಮತ್ತು ಹಿಂಸೆ ನೀಡಲು ಪತಿ ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

Facebook Comments

Sri Raghav

Admin