ಗಲಭೆ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್‍ಗೆ 2 ವರ್ಷ ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

Hardik-Patel--02
ಮೆಹಸಾನ(ಗುಜರಾತ್), ಜು.25-ಗುಜರಾತ್‍ನ ಮೆಹಸಾನ ಜಿಲ್ಲೆಯ ವಿಸ್‍ನಗರ್ ಪಟ್ಟಣದಲ್ಲಿ 2015ರಲ್ಲಿ ನಡೆದ ಗಲಭೆ ಪ್ರಕರಣದ ಸಂಬಂಧ ಪಟಿದಾರ್ ಮೀಸಲು ಹೋರಾಟ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ನ್ಯಾಯಾಲಯವೊಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ವಿಸ್‍ನಗರದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿ.ಪಿ.ಅಗರ್‍ವಾಲ್ ಅವರು ಈ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ಹಾಗೂ ಅವರ ಸಹಚರರಾದ ಲಾಲ್‍ಜಿ ಪಟೇಲ್ ಮತ್ತು ಎ.ಕೆ.ಪಟೇಲ್ ಅವರಿಗೆ ಗಲಭೆ, ದೊಂಬಿ, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಅಕ್ರಮ ಸಭೆ ಜಮಾವಣೆ ಆಪಾದನೆಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‍ಗಳಡಿ ಎರಡು ವರ್ಷ ಸಜೆ ವಿಧಿಸಿದರು. ಅಲ್ಲದೆ, ಈ ಮೂವರಿಗೆ ತಲಾ 50,000 ರೂ.ಗಳ ಜುಲ್ಮಾನೆ ವಿಧಿಸಲಾಗಿದೆ.

ಇದೇ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಇತರ 14 ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ. ಜುಲೈ 23, 2015ರಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆದ ರ್ಯಾಲಿ ವೇಳೆ ಹಿಂಸಾಚಾರ ಭುಗಿಲೆದು, ಉದ್ರಿಕ್ತ ಗುಂಪು ಹಿಂಸೆಯಲ್ಲಿ ತೊಡಗಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿ, ಕೆಲವು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ಹೆಸರನ್ನು ಎಫ್‍ಐಆರ್‍ನಲ್ಲಿ ಸೇರಿಸಲಾಗಿತ್ತು.

Facebook Comments

Sri Raghav

Admin