ಮೊದಲ ತ್ರೈ ಮಾಸಿಕದಲ್ಲಿ ವಿಜಯ ಬ್ಯಾಂಕ್’ಗೆ 144 ಕೋಟಿ ರೂ. ನಿವ್ವಳ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

Vijay-Bank--01
ಬೆಂಗಳೂರು, ಜು.25- ಪ್ರಸಕ್ತ ವರ್ಷದ ಆರ್ಥಿಕ ಸಾಲಿನ ಮೊದಲ ತ್ರೈ ಮಾಸಿಕದಲ್ಲಿ ವಿಜಯ ಬ್ಯಾಂಕ್ 144 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಸುದ್ದಿಗೋಷ್ಟಿಯಲ್ಲಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಆರ್.ಎ.ಶಂಕರ ನಾರಾಯಣನ್ ಮಾತನಾಡಿ, 4ನೇ ತ್ರೈಮಾಸಿಕದಲ್ಲಿ ಬ್ಯಾಂಕ್ 207 ಕೋಟಿ ರೂ. ಗಳಿಸಿತ್ತು. ಈ ಬಾರಿ 144 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. ನಿವ್ವಳ ಆದಾಯ ಬಡ್ಡಿ 4ನೇ ತ್ರೈಮಾಸಿಕದಲ್ಲಿ ಶೇ. 22.73ರಷ್ಟಿತ್ತು. ಈ ಬಾರಿ ಶೇ.27.86ರಷ್ಟು ಹೆಚ್ಚಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಬ್ಯಾಂಕಿನಲ್ಲಿ ಒಟ್ಟು 279674 ಕೋಟಿ ರೂ.ವಹಿವಾಟು ನಡೆದಿದ್ದು, ಕಳೆದ ಸಾಲಿಗಿಂತ ಶೇ. 24.12ರಷ್ಟು ಹೆಚ್ಚಳವಾಗಿದೆ. ನಿವ್ವಳ ಹೂಡಿಕೆ 1,22,348 ಕೋಟಿ ನಡೆದಿದ್ದು, ಶೇ. 31.06 ಏರಿಕೆಯಾಗಿದೆ. ಒಟ್ಟು ಹೂಡಿಕೆ 157326 ಕೋಟಿ ರೂ.ಯಾಗಿದ್ದು, ಶೇ.19.22ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.

ರಿಟೇಲ್ ಸಾಲ ಶೇ. 24.44ರಿಂದ ಶೇ. 25.44ಕ್ಕೆ ಏರಿಕೆಯಾಗಿದೆ. ಗೃಹಸಾಲದಲ್ಲಿ ಶೇ.30.50ರಿಂದ ಶೇ. 30.33ಕ್ಕೆ ಇಳಿಕೆಯಾಗಿದೆ. ಒಟ್ಟಾರೆ ಆದಾಯ ರಹಿತ ಸ್ವತ್ತಿನ ಪ್ರಮಾಣ ಶೇ. 5.24ರಿಂದ ಶೇ.4.10ಕ್ಕೆ ಇಳಿಕೆಯಾದ ಪರಿಣಾಮ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದಲ್ಲಿ 144 ಕೋಟಿ ಲಾಭವಾಗಿದೆ. ಡಿಸೆಂಬರ್ ತಿಂಗಳ ವೇಳೆಗೆ ಶೇ. 4.00ಕ್ಕೆ ಇಳಿಸುವ ಗುರಿಯನ್ನು ಹೊಂದಿದ್ದೇವೆ. ಕಳೆದ ನಾಲ್ಕನೇ ತ್ರೈಮಾಸಿಕ ಸಾಲಿನ ವಹಿವಾಟಿಗೆ ಹೋಲಿಸಿದರೆ 63 ಕೋಟಿ ರೂ. ಲಾಭ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

Facebook Comments

Sri Raghav

Admin