ಇಂದು 19ನೇ ಕಾರ್ಗಿಲ್ ವಿಜಯ್ ದಿವಸ್ : ಹುತಾತ್ಮ ವೀರ ಯೋಧರ ಸ್ಮರಣೆ

ಈ ಸುದ್ದಿಯನ್ನು ಶೇರ್ ಮಾಡಿ

Vijay-Divas--01

ನವದೆಹಲಿ, ಜು.26-ಭಾರತ-ಪಾಕಿಸ್ತಾನದ ನಡುವೆ ಕಾರ್ಗಿಲ್ ಸಮರಕ್ಕೆ ಇಂದು 19ನೇ ವರ್ಷಾಚರಣೆ. ಪಾಕ್ ವಶವಾಗಿದ್ದ ಕಾರ್ಗಿಲ್ ಪ್ರದೇಶವನ್ನು ಯುದ್ಧದಲ್ಲಿ ಗೆದ್ದು ಭಾರತ ವಾಪಸ್ ಪಡೆದ ದಿನ ಜುಲೈ 26. ದೇಶವು ಪ್ರತಿ ವರ್ಷ ಇದನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಿಕೊಂಡು ಬರುತ್ತಿದೆ. 1999ರಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಕಾರ್ಗಿಲ್ ಸಮರದಲ್ಲಿ ಜುಲೈ 26ರಂದು ಭಾರತ ಪಾಕ್ ವಿರುದ್ಧ ವಿಜಯ ದುಂದುಭಿ ಮೊಳಗಿಸಿತು. ಈ ಯುದ್ಧದಲ್ಲಿ ಎರಡು ದೇಶಗಳ 3,500ಕ್ಕೂ ಹೆಚ್ಚು ಯೋಧರು ಪ್ರಾಣ ತೆತ್ತರು.

ದೇಶದ ಗಡಿಯಲ್ಲಿರುವ ಕಾರ್ಗಿಲ್ ಔಟ್ ಪೋಸ್ಟ್ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರ ಗೌರವಾರ್ಥ ಇಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಅನೇಕ ಸಾರ್ಥಕ ಕಾರ್ಯಕ್ರಮಗಳೂ ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್-ದ್ರಾಸ್ ವಲಯ ಮತ್ತು ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಹುತಾತ್ಮ ಯೋಧರು ಮತ್ತು ವೀರಾಗ್ರಣಿಗಳ ಸಾಹಸ ಮತ್ತು ಶೌರ್ಯವನ್ನು ಗುಣಗಾನ ಮಾಡಲಾಯಿತು.

ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅನೇಕ ಗಣ್ಯಾತಿಗಣ್ಯರು ಪಾಲ್ಗೊಂಡು ಹುತಾತ್ಮರಿಗೆ ಗೌರವಾಂಜಲಿ ಸಮರ್ಪಿಸಿದರು.  ಇಂದು ಬೆಳಗ್ಗೆಯಿಂದಲೇ ಕಾಶ್ಮೀರದ ಕಾರ್ಗಿಲ್-ದ್ರಾಸ್ ಯುದ್ಧ ಸ್ಮಾರಕದಲ್ಲಿ 19ನೇ ಕಾರ್ಗಿಲ್ ವಿಜಯ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ದಿನದಂದು ಭಾರತೀಯರು ಸೇನಾ ಪಡೆಯ ಧೈರ್ಯ, ಸಾಹಸ ಮತ್ತು ಕೆಚ್ಚೆದೆಯ ಹೋರಾಟವನ್ನು ಸ್ಮರಿಸುತ್ತಾರೆ. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಯೋಧರಿಗೆ ನಮ್ಮ ನಮನಗಳು ಹಾಗೂ ಅವರ ಕುಟುಂಬದವರ ಋಣ ನಮ್ಮೆಲ್ಲರ ಮೇಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಯೋಧರಿಗೆ ಪ್ರಧಾನಿ ನಮನ :
ಆಫ್ರಿಕಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದ್ದಾರೆ.

Facebook Comments

Sri Raghav

Admin