ನಾಳೆ ಶತಮಾನದ ದೀರ್ಘಾವಧಿ ಚಂದ್ರಗ್ರಹಣ, ತಪ್ಪದೆ ಈ ಮಂತ್ರ ಪಠಿಸಿ..!

ಈ ಸುದ್ದಿಯನ್ನು ಶೇರ್ ಮಾಡಿ

Moon--01

ಬೆಂಗಳೂರು, ಜು.26- ನಾಳೆ 27.07.18 ಶುಕ್ರವಾರ ಆಷಾಢ ಮಾಸ, ಶುಕ್ಲಪಕ್ಷ ಹುಣ್ಣಿಮೆಯಂದು ರಾತ್ರಿ ಚಂದ್ರಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಕಾಣಿಸುವುದರಿಂದ ಆಚರಣೆ ಇದೆ. ರಾತ್ರಿ 11 ಗಂಟೆ 54 ನಿಮಿಷಕ್ಕೆ ಪ್ರಾರಂಭವಾಗಿ ರಾತ್ರಿ 3 ಗಂಟೆ 49 ನಿಮಿಷಕ್ಕೆ ಅಂತ್ಯವಾಗುವುದು. ಉತ್ತರಾಷಾಢ ನಕ್ಷತ್ರ ಆನಂತರ ಶ್ರವಣ ನಕ್ಷತ್ರದಲ್ಲಿ ಗ್ರಹಣ ಸಂಭವಿಸುವುದು. ಧನಸ್ಸು ಮತ್ತು ಮಕರ ರಾಶಿಯವರು ಗ್ರಹಣ ನಿಮಿತ್ತ ಶಾಂತಿ ಮಾಡಿಕೊಳ್ಳಬೇಕು.  ಗ್ರಹಣವಾದ ಮಾರನೇ ದಿನ ಅಂದರೆ ಶನಿವಾರ 28.07.2018 ರಂದು ಬೆಳಗ್ಗೆ ತಲೆಗೆ ಸ್ನಾನ ಮಾಡಿ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ ಈ ಕೆಳಗಿನ ಶ್ಲೋಕ ಪಠಿಸಿರಿ. ಯಥಾಶಕ್ತಿ ದಕ್ಷಿಣೆ ಸಹಿತ ದಾನ ಮಾಡಿರಿ.
ಶ್ಲೋಕ ಪಠಣ..
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ|
ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||1||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ|
ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು||2||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||3||
– ಡಾ.ವಿಶ್ವಪತಿಶಾಸ್ತ್ರಿ

Facebook Comments

Sri Raghav

Admin