ರೈತರಿಗಾಗಿ ತಂದೆಯ ಹೋರಾಟದ ಹಾದಿಯಲ್ಲೇ ನಡೆಯುತ್ತೇನೆ : ದರ್ಶನ್ ಪುಟ್ಟಣ್ಣಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Darshan-Puttannaiah--01
ನಂಜನಗೂಡು,ಜು.26- ಹೊಸ ತಲೆ ಮಾರಿನ ರೈತರನ್ನು ಸಂಘಟನೆಗೊಳಿಸಿ ರೈತರ ಸಮಸ್ಯೆಗಳಿಗೆ ಹೊಸ ರೂಪವನ್ನು ನೀಡುವ ಮೂಲಕ ತಂದೆಯ ರೈತ ಹೋರಾಟದ ಹಾದಿಯನ್ನೇ ಮುಂದುವರೆಸುತ್ತೇನೆ ಎಂದು ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. ನಂಜನಗೂಡು ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಸಮಸ್ಯೆಗಳಿಂದ ನರಳಾಡುತ್ತಿದ್ದರೆ ನಾನು ವಿದೇಶದಲ್ಲಿ ಉದ್ಯಮಿಯಾಗಿ ಐಷರಾಮಿ ಜೀವನ ನಡೆಸುವುದು ಸರಿಯಲ್ಲ ರೈತರ ಸಮಸ್ಯೆಗಳಿಗೆ ಸ್ಪಂಧಿಸಿದ ರಾಜಕಾರಣಿ ಮತ್ತು ಅಧಿಕಾರಿಗಳ ವಿರುದ್ದ ನಮ್ಮ ತಂದೆ ಸಿಡಿದೆದ್ದು ಹೋರಾಟ ನಡೆಸುತ್ತಿದ್ದರು ಅವರ ಹಾದಿಯಲ್ಲಿ ಮುಂದುವರೆಯುವ ಸಲುವಾಗಿ ನಾನು ಅಮೇರಿಕಾವನ್ನು ತೊರೆದು ರೈತರ ಕಷ್ಟ ಕಾರ್ಪಣ್ಯಗಳಿಗೆ ಬೆನ್ನೆಲುಬಾಗಿ ನಿಂತು ಹೋರಾಟದಲ್ಲಿ ಭಾಗಿಯಾಗಲು ಬಂದಿದ್ದೇನೆ ಎಂದರು.

ತಾಲೂಕು ರೈತ ಸಂಘದ ಅಧ್ಯ್ಷ ವಿದ್ಯಾಸಾಗರ್ ಮಾತನಾಡಿ ದಿ.ಕೆ.ಎಸ್.ಪುಟ್ಟಣ್ಣಯ್ಯ ರವರು ರಾಜ್ಯದ ರೈತರ ಸಮಸ್ಯೆಗಳಿಗೆ ಹಗಳಿರುಳು ದುಡಿಯುತ್ತಿದ್ದ ಧೀಮಂತ ನಾಯಕರೆನಿಸಿದ್ದರು ರೈತ ಸಮಸ್ಯೆಗಳ ಸುಳಿಗೆ ಸಿಲುಕಿ ಆತ್ಮಹತ್ಯೆಯಂತಹ ಅಧೋಗತಿಯಿರುವ ಸಂಧರ್ಭದಲ್ಲಿ ತಂದೆಯಂತೆ ರೈತರ ಸಮಸ್ಯೆಗಳಿಗೆ ಭಾಗಿಯಾಗಲು ಅಮೇರಿಕಾದಲ್ಲಿ ಸಾಫ್ಟ್ವೇರ್ ಉದ್ಯಮವನ್ನು ತೊರೆದು ಬಂದಿರುವ ದರ್ಶನ್ ಪುಟ್ಟಣ್ಣಯ್ಯರವರ ಹೋರಾಟಗಳಲ್ಲಿ ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿದರು. ರೈತ ಮುಖಂಡರಾದ ಅಶ್ವಥ್ನಾರಾಯಣರಾಜೇ ಅರಸ್, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಹೊಸಕೋಟೆ ಬಸವರಾಜು, ಸತೀಶ್ರಾವ್, ನೇತ್ರಾವತಿ, ಶಿರಮಳ್ಳಿ ಸಿದ್ದಪ್ಪ, ಸಿದ್ದರಾಜು, ನಾಗರಾಜು ಸೇರಿದಂತೆ ಹಲವಾರು ಪ್ರಮುಖರು ಇದ್ದರು.

Facebook Comments

Sri Raghav

Admin