ಇಮ್ರಾನ್ ಖಾನ್’ಗೆ ಪಾಕ್ ಪ್ರಧಾನಿ ಪಟ್ಟ ಪಕ್ಕಾ..!

ಈ ಸುದ್ದಿಯನ್ನು ಶೇರ್ ಮಾಡಿ

Imran-akHan--01

ಇಸ್ಲಾಮಾಬಾದ್, ಜು.26- ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತ್ರೇಕ್-ಎ-ಇನ್ಸಾಫ್(ಪಿಟಿಐ) ಸಾರ್ವತ್ರಿಕ ಚುನಾವಣೆಯಲ್ಲಿ 122 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊ್ಮುದೆ. ಇದರೊಂದಿಗೆ 65 ವರ್ಷದ ಇಮ್ರಾನ್ ಪಾಕಿಸ್ತಾನದ ಮುಂದಿನ ಪ್ರಧಾನಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ.

272 ಸ್ಥಾನಗಳ ರ್ಟ್ರಾೀಯ ಅಸ್ಲೆಂಬಿಯಲ್ಲಿ ಇಂದು ಮಧ್ಯಾಹ್ನ ಮತ ಎಣಿಕೆ ಪ್ರಗತಿಯಲ್ಲಿದ್ದಾಗ 115 ಸ್ಥಾನಗಳನ್ನು ಗಳಿಸಿ ಪಿಟಿಐ ಅತಿದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚನೆಯತ್ತ ದಾಪುಗಾಲು ಹಾಕಿತ್ತು. ನಿನ್ನೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) 64 ಸ್ಥಾನಗಳನ್ನು ಗಳಿಸಿತ್ತು.  ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 43 ಸ್ಥಾನಗಳನ್ನು ಹಾಗೂ ಇತರ ಪಕ್ಷಗಳು 50 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು. ಇಸ್ಲಾಮಾಬಾದ್ ಕ್ಷೇತ್ರದಲ್ಲಿ ಇಮ್ರಾನ್ ಮಾಜಿ ಪ್ರಧಾನಿ ಹಾಗೂ ಪಿಎಂಎಲ್-ಎನ್ ನಾಯಕ ಶಾೀದ್ ಖಖಾನ್ ಅಬ್ಬಾಸಿ ಅವರನ್ನು 92,891 ಮತಗಳ ಅಂತರದಿಂದ ಮಣಿಸಿ ಜಯ ದಾಖಲಿಸಿದ್ದಾರೆ. ಬಹುಮತಕ್ಕೆ ಕೊರೆತೆಯಾದಲ್ಲಿ ಇಮ್ರಾನ್ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಚುನಾವಣಾ ಪೂರ್ವ ಸುೀಕ್ಷೆಗಳು ತಿಳಿಸಿವೆ.

ಹೊಸ ಚುನಾವಣಾ ವ್ಯವಸ್ಥೆಯಿಂದಾಗಿ ಕೆಲಕಾಲ ಮತ ಎಣಿಕೆ ಕಾರ್ಯ ಳಂಬವಾಗಿತ್ತು. ಇಂದು ಅಪರಾಹ್ನದ ವೇಳಗೆ ಸ್ಪಷ್ಟ ಫಲಿತಾಂಶದ ಚಿತ್ರಣ ಲಭಿಸಲಿದೆ. ರ್ಟ್ರಾೀಯ ಅಸೆಂಬ್ಲಿಯೊಂದಿಗೆ ನಾಲ್ಕು ಪ್ರಾಂತೀಯ ಧಾನಸಭೈಗಳಾದ ಪಂಜಾಬ್, ಸಿಂಧ್, ಬಲೂಚಿಸ್ತಾನ್ ಮತ್ತು ಖೈಬರ್-ಪಖ್ತುನ್ಖ್ವಾಗಳಲ್ಲೂ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ. ಪಂಜಾಬ್ನಲ್ಲಿ ಪಿಎಂಎಲ್-ಎನ್, ಸಿಂಧ್ನಲ್ಲಿ ಪಿಪಿಪಿ, ಖೈಬರ್-ಪಖ್ತುನ್ಖ್ವಾದಲ್ಲಿ ಪಿಟಿಐ ಹಾಗೂ ಬಲೂಚಿಸ್ತಾನದಲ್ಲಿ ಬಲೂಚಿಸ್ತಾನ ಅವಾು ಪಾರ್ಟಿ ಮುನ್ನಡೆಯಲ್ಲಿದೆ.

ಪಿಟಿಐ ಜಯದತ್ತ ಮುನ್ನಡೆ ಸಾಧಿಸುತ್ತಿದ್ದಂತೆ ಇಮ್ರಾನ್ ಬಣದ ಕಾರ್ಯಕರ್ತರು ಪಾಕಿಸ್ತಾನದ ಧೆಡೆ ಜಯೋತ್ಸವ ಆಚರಿಸಿದರು. ಇನ್ನೊಂದೆಡೆ, ಚುನಾವಣೆಗಳಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪಿಎಂಎಲ್-ಎನ್ ಕಾರ್ಯಕರ್ತರು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ನಿನ್ನೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂಬ ಪದಚ್ಯುತ ಪ್ರಧಾನಮಂತ್ರಿ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಆರೋಪಗಳನ್ನು ಪಾಕ್ ಚುನಾವಣಾ ಆಯೋಗ ತಳ್ಳಿ ಹಾಕಿದೆ.

Facebook Comments

Sri Raghav

Admin