ರುಮಾಲಿನಿಂದ ವ್ಯಕ್ತಿಯೊಬ್ಬನ ಪ್ರಾಣ ಉಳಿಸಿದ ಆಪದ್ಬಾಂಧವ ಶಾಸಕ….!

ಈ ಸುದ್ದಿಯನ್ನು ಶೇರ್ ಮಾಡಿ

Mangal-Ram--01

ಜೈಪುರ್, ಜು.26-ಇದು ರಾಜಸ್ತಾನ ಬಿಜೆಪಿ ಶಾಸಕ ಮಂಗಲ್ ರಾಮ್ ಅವರ ಸಮಯ ಪ್ರಜ್ಞೆಯಿಂದ ವ್ಯಕ್ತಿಯೊಬ್ಬನ ಜೀವ ಉಳಿದ ಸಂಗತಿ. ಭೋರ್ಗರೆಯುತ್ತಿದ್ದ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ಶಾಸಕರು ತಾವು ಧರಿಸಿದ್ದ ರುಮಾಲು (ಟರ್ಬನ್) ಸಹಾಯದಿಂದ ಪ್ರಾಣ ರಕ್ಷಿಸಿ ಸುದ್ದಿಯಾಗಿದ್ದಾರೆ. ಕಿಶೋರಿ ಲಾಲ್ ಮೀನಾ(50) ಎಂಬ ಬೈಕ್ ಸವಾರ ಇಮ್ಲಿ ಫಾಟಕ್ ಬಳಿ ಕತ್ರಾಪುರ ಕಾಲುವೆಯ ಸೇತುವೆ ದಾಟುತ್ತಿದ್ದಾಗ ಆಯತಪ್ಪಿ ಬಿದ್ದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಸನಿಹದಲ್ಲೇ ಇದ್ದ ಶಾಸಕ ಮಂಗಲ್ ರಾಮ್ ಕಿಶೋರಿ ಲಾಲ್ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಧ್ವನಿ ಕೇಳಿ ತಕ್ಷಣ ತಮ್ಮ ಭದ್ರತಾ ಸಿಬ್ಬಂದಿ ಜೊತೆ ಸ್ಥಳಕ್ಕೆ ಧಾವಿಸಿದರು.

ತಕ್ಷಣ ಸಮಯ ಪ್ರಯಿಂದ ಮಂಗಲ್ ರಾಮ್ ತಮ್ಮ ರುಮಾಲು ಎಸೆದು. ಅದನ್ನೇ ಹಗ್ಗದಂತೆ ಮಾಡಿಕೊಂಡು ಸಿಬ್ಬಂದಿ ನೆರವಿನಿಂದ ಆತನನ್ನು ರಕ್ಷಿಸಿದರು. ಒಂದೆರಡು ನಿಮಿಷ ತಡವಾಗಿದ್ದರೂ ಕಿಶೋರಿ ಲಾಲ್ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದರು. ಆತನ ಪ್ರಾಣ ಉಳಿಸಿದ ಶಾಸಕ ಸಾಹಸವನ್ನು ಸ್ಥಳೀಯರು ಕೊಂಡಾಡಿದ್ದಾರೆ. ಅಲ್ವರ್ ಜಲ್ಲೆಯ ಕತುಮರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಂಗಲ್ ರಾಮ್ ಉತ್ತಮ ಕಾರ್ಯಗಳಿಂದಲೂ ಮತದಾರರ ಮನ ಗೆದ್ದಿದ್ದಾರೆ.

Facebook Comments

Sri Raghav

Admin