ಆಟಗಾರರ ಜೊತೆ ಲೈವ್ ಆಗಿ ಪುಟ್ಬಾಲ್ ಆಡಲು ಮೈದಾನಕ್ಕೆ ಬಂದ ಕಾಂಗರೂ..!

ಈ ಸುದ್ದಿಯನ್ನು ಶೇರ್ ಮಾಡಿ

Ds-2
ಆಸ್ಟ್ರೇಲಿಯಾದ ಕ್ಯಾನ್‍ಬೆರ್ರಾದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯವೊಂದರ ವೇಳೆ ಹೊಸ ಅತಿಥಿಯ ಅಗಮನದಿಂದ ಕೆಲಕಾಲ ಆಟ ಸ್ಥಗಿತಗೊಂಡಿತ್ತು. ಅಷ್ಟಕ್ಕೂ ಕ್ರೀಡಾಂಗಣಕ್ಕೆ ಲಗ್ಗೆ ಹಾಕಿದ ಆ ಅತಿಥಿ ಯಾರು ? ಕುತೂಹಲವೇ..? ನೀವೇ ನೋಡಿ…! ಆಸ್ಟ್ರೇಲಿಯಾದ ಕ್ಯಾನ್‍ಬೆರ್ರಾದ ಡಿಯಾಕಿನ್ ಕ್ರೀಡಾಂಗಣದಲ್ಲಿ ನ್ಯಾಷನಲ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಪಂದ್ಯವೊಂದು ನಡೆಯುತ್ತಿದ್ದಾಗ ಅಲ್ಲಿಗೆ ಧಾವಿಸಿದ ಕಾಂಗರೂ ಕೆಲಕಾಲ ಆಟಗಾರರ ಕುತೂಹಲ ಕೆರಳಿಸಿತ್ತು.
ಪಂದ್ಯದ ಹಾಫ್ ಟೈಮ್ ವೇಳೆ ಕ್ರೀಡಾಂಗಣಕ್ಕೆ ನುಗ್ಗಿದ ಕಾಂಗೂರು ಗೋಲ್ ಬಾಕ್ಸ್ ಸಮೀಪ ಪೆನಾಲ್ಟಿ ಸ್ಟಾಪ್ ಬಳಿ ಕೆಲಕಾಲ ಆರಾಮವಾಗಿ ಮಲಗಿತು. ಈ ಅನಿರೀಕ್ಷಿತ ಅತಿಥಿಯನ್ನು ನೋಡಿ ಪಟುಗಳು ಓಹೋ ಇದು ಕಾಂಗರೂ ಅಲ್ಲ ಸಾಕರೂ ಎಂದು ಮಾತನಾಡಿಕೊಂಡರು.

Ds-1

ಕೆಲವರು ಇದರತ್ತ ಫುಟ್ಬಾಲ್ ಚೆಂಡುಗಳನ್ನು ಎಸೆದು ಆಟವಾಡಲು ಪ್ರೇರೇಪಿಸಿದರು. ಇದನ್ನು ಮೈದಾನದಿಂದ ಹೊರಗೆ ಕಳುಹಿಸಲು ವಾಹನವೊಂದು ಧಾವಿಸಿದಾಗ ಇದು ಕ್ರೀಡಾಂಗಣದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಚಂಗನೆ ಜಿಗಿದು ಓಡಾಡಿತು. ಹೀಗೆ ಕಣ್ಣಾಮುಚ್ಚಾಲೆ ಆಟ ಮುಂದುವರಿದಿತ್ತು. ಕೆಲಕಾಲ ನಂತರ ಕಾಂಗರೂ ಮೈದಾನದಿಂದ ಹೊರಗೆ ಹೋಯಿತು. ನಂತರ ನಡೆದ ಪಂದ್ಯದಲ್ಲಿ ಬೆಲ್‍ದೊನ್ನೆನ್ ಯುನೈಟೆಡ್ ತಂಡವು 2 ಗೋಲುಗಳಿಂದ ಕ್ಯಾನ್‍ಬೆರ್ರಾ ಎಫ್‍ಸಿ ತಂಡವನ್ನು ಮಣಿಸಿತು.

Ds

Facebook Comments