‘ಪ್ರಯಾಣಿಕರ ಗಮನಕ್ಕೆ’ ಚಿತ್ರ ನಾಳೆ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

Prayanikara-Gamanakke

ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ವಿನೂತನ ಶೈಲಿಯ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಪ್ರಯಾಣಿಕರ ಗಮನಕ್ಕೆ ಈ ವಾರ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ.  ಸೃಷ್ಟಿ ಎಂಟರ್‍ಪ್ರೈಸಸ್ ಮೂಲಕ ನಿರ್ಮಾಪಕ ಸುರೇಶ್ ನಿರ್ಮಾಣದ ಪ್ರಥಮ ಚಿತ್ರ ಇದಾಗಿದ್ದು, ಮೋಹನ್‍ಕುಮಾರ್ ಎಸ್.ಕೆ. ಅವರ ಸಹ ನಿರ್ಮಾಣದಲ್ಲಿ ಪ್ರಯಾಣಿಕರ ಗಮನಕ್ಕೆ ಒಂದು ವಿಶೇಷವಾದ ಚಿತ್ರವನ್ನು ತರುತ್ತಿದ್ದಾರೆ.

Prayanikara-Gamanakke-1

ಯುವ ಪ್ರತಿಭೆ ಮನೋಹರ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಗೂಗ್ಲಿ, ಪಟಾಕಿ, ಶ್ರೀಕಂಠ, ಪ್ರೀತಿ-ಗೀತಿ ಇತ್ಯಾದಿ ಸೇರಿದಂತೆ ಹಲವಾರು ಚಲನಚಿತ್ರಗಳಿಗೆ ಸಹ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮನೋಹರ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿ ಈ ಚಿತ್ರ ನಿರ್ದೇಶಿಸಿದ್ದಾರೆ. ಬಸ್‍ವೊಂದರಲ್ಲಿ ಪ್ರಯಾಣಿಸುವ ವಿವಿಧ ಪ್ರಯಾಣಿಕರ ಜೀವನದ ಜೊತೆ ಜೊತೆಗೆ ಸಾಗುವ ಕಥೆ ಇದಾಗಿದೆ. ಒಂದು ಜರ್ನಿ, ಹೊಸ ಹೊಸ ಪ್ರಯಾಣಿಕರ ಜತೆ ಸ್ನೇಹವನ್ನು ಸೃಷ್ಟಿ ಮಾಡುತ್ತದೆ. ಹೀಗೆ ಶುರುವಾಗುವ ಜರ್ನಿ, ಮುಗಿಯುವ ವೇಳೆಗೆ ಅಲ್ಲಿನ ಪಾತ್ರಧಾರಿಗಳ ಮೇಲೆ ಅದು ಬೀರುವ ಪ್ರಭಾವ ಎಂಥದ್ದು ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ನಿರ್ದೇಶಕ ಮನೋಹರ ಅವರು ಮಾಡಿದ್ದಾರೆ.

ಈ ಹಿಂದೆ ವೀರ ಪುಲಕೇಶಿ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ಭರತ್ ಸರ್ಜಾ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಮಕೂರು ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತಾ ರಂಗನಾಥ್, ದೀಪಕ್ ಶೆಟ್ಟಿ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಈ ಚಿತ್ರದ ಪ್ರಮಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಜಯಲಕ್ಷ್ಮಿ ಫಿಲಂಸ್‍ನ ರಾಜು ವಹಿಸಿಕೊಂಡಿದ್ದಾರೆ. ವಿಜೇತ್ ಕೃಷ್ಣ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಿರಣ್ ಹಂಪಾಪುರ ಈ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. ಇಡೀ ಚಿತ್ರವನ್ನು ಬೆಂಗಳೂರು ಸುತ್ತಮುತ್ತಲ ಲೊಕೇಷನ್‍ಗಳಲ್ಲೇ ಬಹುಪಾಲು ಚಿತ್ರೀಕರಿಸಲಾಗಿದ್ದು, ನೈಜತೆಗೆ ಹತ್ತಿರವಾದಂಥ ದೃಶ್ಯಗಳನ್ನು ರಿಯಲ್ ಆಗಿಯೇ ಶೂಟ್ ಮಾಡಿರುವುದು ಈ ಚಿತ್ರದ ಮತ್ತೊಂದು ವಿಶೇಷ.ಈ ಚಿತ್ರ ರಾಜ್ಯಾದ್ಯಂತ ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ.

 

Prayanikara-Gamanakke-2

Facebook Comments

Sri Raghav

Admin