ಸುರಕ್ಷಾ ಮತ್ತು ಸ್ವಾಸ್ಥ್ಯ ಇಲಾಖೆ ಉಪನಿರ್ದೇಶಕನ ಮನೆ ಮೇಲೆ ಎಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ACB
ಬೆಂಗಳೂರು, ಜು.27- ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ಮುಂದುವರೆಸಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕೈಗಾರಿಕಾ ಸುರಕ್ಷಾ ಮತ್ತು ಸ್ವಾಸ್ಥ್ಯ ಇಲಾಖೆ ಉಪನಿರ್ದೇಶಕ ನವನೀತ್‍ಮೋಹನ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದರು. ಗಂಗಾನಗರದಲ್ಲಿರುವ ನವನೀತ್‍ಮೋಹನ್ ಅವರ ವಾಸದ ಮನೆ, ಆರ್‍ಟಿ ನಗರ-ಶಾಂಪುರದಲ್ಲಿರುವ ಮನೆ ಮತ್ತು ಅವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ನವನೀತ್‍ಮೋಹನ್ ಅವರಿಗೆ ಸೇರಿದ ಅಕ್ರಮ ಆಸ್ತಿಪಾಸ್ತಿಗಳ ಮೂಲದ ಬಗ್ಗೆ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Facebook Comments