ತಿರುಪತಿ ತಿಮ್ಮಪ್ಪನ ಸುಪ್ರಭಾತ ಪೂಜೆಯಲ್ಲಿ ಪಾಲ್ಗೊಂಡ ಗೌಡರ ಕುಟುಂಬ

ಈ ಸುದ್ದಿಯನ್ನು ಶೇರ್ ಮಾಡಿ

Cm-Tirupati--01

ತಿರುಪತಿ, ಜು.27-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕುಟುಂಬ ಇಂದು ಮುಂಜಾನೆ ತಿರುಮಲದ ತಿಮ್ಮಪ್ಪನ ದರ್ಶನ ಪಡೆದು ಸುಪ್ರಭಾತ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ, ಚೆನ್ನಮ್ಮ ದೇವೇಗೌಡ ಸೇರಿದಂತೆ ಗೌಡರ ಕುಟುಂಬದ ಹಲವು ಸದಸ್ಯರು ಸುಪ್ರಭಾತ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಪದ್ಮಾವತಿ ದೇವಾಲಯಕ್ಕೆ ತೆರಳಿ ಗೌಡರ ಕುಟುಂಬ ವಿಶೇಷ ಪೂಜೆ ಸಲ್ಲಿಸಿತು.   ಹುಣ್ಣಿಮೆ ಹಿನ್ನೆಲೆಯಲ್ಲಿ ಗೌಡರ ಕುಟುಂಬ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿತು.   ಬೆಂಗಳೂರಿನಿಂದ ನಿನ್ನೆ ಸಂಜೆ ತಿರುಪತಿಗೆ ಆಗಮಿಸಿದ ಗೌಡರ ಕುಟುಂಬ ಇಂದು ತಿಮ್ಮಪ್ಪನ ದರ್ಶನ ಪಡೆದ ನಂತರ ಬೆಂಗಳೂರಿಗೆ ವಾಪಸ್ಸಾಯಿತು.

Facebook Comments

Sri Raghav

Admin