ಮೋದಿ-ಜಿನ್‍ಪಿಂಗ್ ಭೇಟಿ : ಭಾರತ-ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಜೋಹಾನ್ಸ್‍ಬರ್ಗ್, ಜು.27-ಭಾರತ ಮತ್ತು ಚೀನಾ ನಡುವೆ ಶಾಂತಿ ಸ್ಥಾಪನೆಗೆ ಬದ್ಧವಾಗಿರುವುದನ್ನು ಪುನರುಚ್ಚರಿಸಿರುವ ಉಭಯ ದೇಶಗಳು, ತಮ್ಮ ಸೇನೆಗಳ ನಡುವೆ ಸಂಪರ್ಕ-ಸಂವಹನವನ್ನು ಹೆಚ್ಚಿಸಲೂ ಸಮ್ಮತಿ ಸೂಚಿಸಿವೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‍ಬರ್ಗ್‍ನಲ್ಲಿ ವಾರ್ಷಿಕ ಬ್ರಿಕ್ಸ್ ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಪ್ರತ್ಯೇಕವಾಗಿ ಪರಸ್ಪರ ಭೇಟಿಯಾಗಿ ಕೆಲ ಮಹತ್ವದ ವಿಷಯಗಳೊಂದಿಗೆ ಚರ್ಚಿಸಿದರು.

Modi 05

ಭಾರತ-ಚೀನಾ ಗಡಿ ಭಾಗದ ಡೋಕ್ಲಮ್‍ನಲ್ಲಿ ಮತ್ತೆ ಬೀಜಿಂಗ್ ಕ್ಯಾತೆ ತೆಗೆದಿರುವ ಸಂದರ್ಭದಲ್ಲೇ ಮೋದಿ ಮತ್ತು ಜಿನ್‍ಪಿಂಗ್ ಭೇಟಿ ಮತ್ತು ಚರ್ಚೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತ ಮತ್ತು ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗಾಗಿ ಉಭಯದೇಶಗಳ ನಡುವೆ ಮಿಲಿಟರಿ ಸಂಪರ್ಕ-ಸಂವಹನ ಹೆಚ್ಚಿಸಲು ಪ್ರಧಾನಿ ಮತ್ತು ಅಧ್ಯಕ್ಷರು ಪರಸ್ಪರ ಸಹಮತ ವ್ಯಕ್ತಪಡಿಸಿದ್ದಾರೆ. ಉಭಯ ದೇಶಗಳ ನಡುವಣ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಬದ್ದವಿರುವುದಾಗಿ ಈ ನಾಯಕರು ಪುನರುಚ್ಚರಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ನಿನ್ನೆ ತಡರಾತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Modi 04

ಬಿಕ್ಸ್ ಶೃಂಗಸಭೆಯ ವೇಳೆ ಮೋದಿ ಮತ್ತು ಜಿನ್‍ಪಿಂಗ್ ಭೇಟಿಯಾಗಿ ಉಭಯ ದೇಶಗಳ ನಡುವೆ ಬಾಂಧವ್ಯ ಬಲವರ್ಧನೆ ಸಮಾಲೋಚನೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವಿಟ್ ಮಾಡಿದ್ದಾರೆ.

Modi 03 Modi 02

Facebook Comments

Sri Raghav

Admin