ಮಹಾರಾಷ್ಟ್ರದಲ್ಲಿ ಮರಾಠ ಮೀಸಲು ಹೋರಾಟಕ್ಕೆ ಮತ್ತೊಂದು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Maharashtra--01

ಮುಂಬೈ, ಜು.27-ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ಇದರೊಂದಿಗೆ ಈ ಪ್ರತಿಭಟನೆಯಲ್ಲಿ ಪ್ರಾಣತೆತ್ತವರ ಸಂಖ್ಯೆ ಎರಡಕ್ಕೇರಿದ್ದು, ಪೊಲೀಸರೂ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ನವಿ ಮುಂಬೈನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ತೀವ್ರ ಗಾಯಗೊಂಡಿದ್ದ ರೋಹನ್ ಟೊಡ್ಕರ್(25) ಮುಂಬೈನ್ ಸರ್ಕಾರಿ ಒಡೆತನದ ಜೆಜೆ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟರು ಎಂದು ಆಸ್ಪತ್ರೆಯ ದೀನ್ ಡಾ. ಮುಕುಂದ್ ತಯಾಡೆ ತಿಳಿಸಿದ್ದಾರೆ.

ಕೋಪಾರ್ ಕೈರಾನೆ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ರೋಹನ್‍ಗೆ ತೀವ್ರ ಪೆಟ್ಟಾಗಿತ್ತು. ಜೆಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ರಾತ್ರಿ ಕೊನೆಯುಸಿರೆಳೆದರು. ಅಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ಎಂಟು ಅಧಿಕಾರಿಗಳೂ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, 20 ಪೊಲೀಸ್ ವಾಹನಗಳೂ ಸೇರಿದಂತೆ 150ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ.

ಹಿಂಸಾಚಾರದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸ 40 ಶಾಟ್‍ಗನ್ ಸುತ್ತುಗಳು, 22 ರಬ್ಬರ್ ಬುಲೆಟ್‍ಗಳು, 42 ಅಶ್ರುವಾಯು ಶೆಲ್‍ಗಳು ಮತ್ತು 11 ಟಿಯರ್‍ಗ್ಯಾಸ್ ಗ್ರೆನೇಡ್‍ಗಳನ್ನು ಬಳಸಿದ್ದರು. ಜುಲೈ 23ರಂದು ಪ್ರತಿಭಟನೆ ವೇಳೆ 27 ವರ್ಷದ ಯುವ ಪ್ರತಿಭಟನಾಕಾರನೊಬ್ಬ ಔರಂಗಾಬಾದ್‍ನ ಗೋದಾವರಿ ನದಿಗೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ.

Facebook Comments

Sri Raghav

Admin