ಯೋಗ ಕೇಂದ್ರದ ಹೆಸರಲ್ಲಿ ‘ಭೋಗದಂದೆ’ ನಡೆಸುತ್ತಿದ್ದ ಐವರು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Prostitution

ಮೈಸೂರು, ಜು.27-ಯೋಗ ಕೇಂದ್ರದ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕೇಂದ್ರದ ಮೇಲೆ ಪೊಲೀಸರು ದಾಳಿ ಮಾಡಿ ಏಳು ಯುವತಿಯರನ್ನು ರಕ್ಷಿಸಿದ್ದಾರೆ.ಈ ವೇಳೆ ದಂಧೆಯಲ್ಲಿ ತೊಡಗಿದ್ದ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ನಗರದ ರಮಾವಿಲಾಸ ರಸ್ತೆಯ ಯೋಗ ಕೇಂದ್ರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದೇವರಾಜ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿ ಈ ಯೋಗ ಕೇಂದ್ರದಲ್ಲಿ ಮಸಾಜ್ ಹೆಸರಿನಲ್ಲಿ ಯುವತಿಯರನ್ನು ವೇಶ್ಯಾವಾಟಿಕೆ ದಂಧೆಗೆ ತೊಡಗಿಸಿಕೊಳ್ಳಲಾಗಿದ್ದನ್ನು ಪತ್ತೆಹಚ್ಚಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಾಜ್ಯ ಸೇರಿದಂತೆ ಕೇರಳ, ಮಹಾರಾಷ್ಟ್ರ ಇನ್ನಿತರ ಸ್ಥಳಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದ್ದು, ಕೇಂದ್ರ ನಡೆಸುತ್ತಿದ್ದ ವ್ಯಕ್ತಿಯ ಜಾಲದಲ್ಲಿ ಮತ್ತಷ್ಟು ಯುವತಿಯರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಯೋಗ ಕೇಂದ್ರವೆಂದು ಬೋರ್ಡ್ ಹಾಕಿ ಒಳಗೆ ಮಸಾಜ್ ಪಾರ್ಲರ್ ದಂಧೆ ನಡೆಸುತ್ತಿದ್ದರು. ಅಂತರ್ಜಾಲ ಮೂಲಕ ಗ್ರಾಹಕರನ್ನು ಪರಿಚಯಿಸಿಕೊಂಡು ಮಸಾಜ್ ಪಾರ್ಲರ್ ಸಮೀಪದ ರಸ್ತೆಗೆ ಕರೆಸಿ ಏಜೆಂಟರು ಅವರನ್ನು ಸಂಪರ್ಕಿಸಿ ಅವರ ಬಗ್ಗೆ ಮಾಹಿತಿ ಪಡೆದು ಅವರನ್ನು ಕೇಂದ್ರಕ್ಕೆ ಕರೆತರಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin