ಪ್ರಯಾಣಿಕರ ಸೋಗಿನಲ್ಲಿ ಹಣ-ಆಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ವಂಚಕಿಯರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

crime
ಬೆಂಗಳೂರು, ಜು.27- ಪ್ರಯಾಣಿಕರ ಸೋಗಿ ನಲ್ಲಿ ಬಸ್‍ಗಳಲ್ಲಿ ಪ್ರಯಾಣಿಸುತ್ತ ಚಿನ್ನಾಭರಣ ಹಾಗೂ ಹಣವನ್ನು ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶ ಮೂಲದ ಇಬ್ಬರು ಮಹಿಳಾ ವಂಚಕಿಯರನ್ನು ಉತ್ತರ ವಿಭಾಗದ ಆರ್‍ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ನಿವಾಸಿಗಳಾದ ಲಕ್ಷ್ಮಿ ದೇವಿ (38) ಮತ್ತು ಮೀನಾಕ್ಷಿ (30) ಬಂಧಿತ ಆರೋಪಿಗಳಾಗಿದ್ದು, ಇವರಿಂದ 35 ಲಕ್ಷ ಬೆಲೆಬಾಳುವ 1 ಕೆಜಿ 275 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಇವರಿಬ್ಬರು ಬಯ್ಯಪ್ಪನಹಳ್ಳಿಯಲ್ಲಿ ವಾಸವಾ ಗಿದ್ದು, ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಹತ್ತಿ ಮಹಿಳೆಯರ ಬ್ಯಾಗ್ ಮತ್ತು ಪರ್ಸ್‍ಗಳಿಂದ ಚಿನ್ನಾಭರಣ, ಹಣ ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ 28 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಆರ್‍ಎಂಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆರ್‍ಎಂಸಿ ಯಾರ್ಡ್ ಠಾಣೆಯ 13 ಪ್ರಕರಣ, ಪೀಣ್ಯ 5, ಯಶವಂತಪುರ 3, ಮಲ್ಲೇಶ್ವರಂ 4, ಜಾಲಹಳ್ಳಿ, ಸೋಲದೇವನಹಳ್ಳಿ, ರಾಜಾಜಿನಗರ ವ್ಯಾಪ್ತಿಯ ತಲಾ ಒಂದೊಂದು ಪ್ರಕರಣ ಪತ್ತೆಯಾದಂತಾಗಿದೆ.

Facebook Comments

Sri Raghav

Admin