ದೆಹಲಿಯ ಗೋಶಾಲೆಯೊಂದರಲ್ಲಿ ನಿಗೂಢವಾಗಿ 36 ಹಸುಗಳು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Cows--01

ನವದೆಹಲಿ, ಜು.28-ಮೂವತ್ತಾರು ಹಸುಗಳು ಶಂಕಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ರಾಜಧಾನಿ ದೆಹಲಿಯ ದ್ವಾರಕ ಪ್ರದೇಶದ ಚಾವ್ಲಾದಲ್ಲಿನ ಗೋಶಾಲೆಯಲ್ಲಿ ಬೆಳಕಿಗೆ ಬಂದಿದೆ. ಗೋವುಗಳ ಸಾವಿಗೆ ನಿಖರ ಕಾರಣ ಪತ್ತೆ ಮಾಡಲು ಸರ್ಕಾರ ತನಿಖೆಗೆ ಆದೇಶಿಸಲಾಗಿದೆ. ಆಚಾರ್ಯ ಸುಶೀಲ್ ಗೋಸದನ್ ಟ್ರಸ್ಟ್ ಒಡೆತನದ 20 ಎಕರೆ ಪ್ರದೇಶದಲ್ಲಿರುವ ಈ ವಿಶಾಲ ಗೋ ಶಾಲೆಯಲ್ಲಿ 1,400ಕ್ಕೂ ಹೆಚ್ಚು ಗೋವುಗಳಿದ್ದು, ಇವುಗಳಲ್ಲಿ 36 ಹಸುಗಳು ಮೃತಪಟ್ಟಿವೆ.

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ನಿನ್ನೆ ಅಪರಾಹ್ನ ಸುದ್ದಿ ತಿಳಿಯುತ್ತಿದ್ದಂತೆ ದ್ವಾರಕ ಉಪ ಪೋಲೀಸ್ ಆಯುಕ್ತ ಅಂಟೋ ಅಲ್ಫೊನ್ಸೋ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಘಟನೆ ಬಗ್ಗೆ ದೆಹಲಿ ಸರ್ಕಾರ ತನಿಖೆಗೆ ಆದೇಶಿಸಿದ್ದು, ಮುಂದಿನ 24 ತಾಸುಗಳ ಒಳಗೆ ವರದಿ ನೀಡುವಂತೆ ಸೂಚಿಸಿದೆ.  ಕೊಕ್ರೊಲಾ, ಗೋಯ್ಲಾ ಡೈರಿ, ನ ಜಾಫ್‍ಗಢ್, ದಿಚೌನ್ ಕಲಾನ್, ಚಾವ್ಲಾ ಮತ್ತು ನಂಗ್ಲಿ ಡೈರಿಗಳ ಪಶು ವೈದ್ಯರ ತಂಡವು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು. ನಂತರ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವರದಿ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಈ ಸ್ಥಳದಲ್ಲಿ ಗೋಶಾಲೆ ನಡೆಸಲು 1995ರಲ್ಲಿ ಜಮೀನು ಮಂಜೂರು ಮಾಡಲಾಗಿತ್ತು. 20ಕ್ಕೂ ಹೆಚ್ಚು ಮಂದಿ ಈ ಗೋಶಾಲೆಯಲ್ಲಿ ಕೆಲಸ ಮಾಡುತ್ತಾರೆ.

ಕಳೆದ ಎರಡು ದಿನಗಳಿಂದ ನೀರಿನ ಪಂಪ್ ಮೋಟಾರ್ ಕೆಟ್ಟು ಹೋಗಿದ್ದು ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಗವಾಗಿಲ್ಲ. ಅಸ್ವಸ್ಥಗೊಂಡ ಗೋವುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ನಾವು ಎಲ್ಲ ಕ್ರಮಗಳನ್ನು ಕೈಗೊಂಡೆವು. ಆದಾಗ್ಯೂ 36 ರಾಸುಗಳು ಮೃತಪಟ್ಟವು ಎಂದು ಗೋಶಾಲೆ ಕೆಲಸಗಾರನೊಬ್ಬ ಹೇಳಿದ್ದಾನೆ.

Facebook Comments

Sri Raghav

Admin