ಕತ್ತೆಗಳಿಗೆ ಬಣ್ಣ ಬಳಿದು ಜೀಬ್ರಾ ಎಂದು ಬಿಂಬಿಸಿದ ಮೃಗಾಲಯ..!

ಈ ಸುದ್ದಿಯನ್ನು ಶೇರ್ ಮಾಡಿ

Zeebra--01
ಕೈರೋ.ಜು. 27 : ಕತ್ತೆಗಳಿಗೆ ಬಣ್ಣ ಬಳಿದು ಝೀಬ್ರಾದಂತೆ ಪ್ರದರ್ಶಿಸಿದ ಈಜಿಪ್ಟ್ ರಾಜಧಾನಿ ಕೈರೋದ ಮೃಗಾಲಯವೊಂದು ಅಪಹಾಸ್ಯಕ್ಕೀಡಾಗಿದೆ. ಕತ್ತೆಗಳು ಝೀಬ್ರಾದಂತೆ ಕಾಣಲು ಅವುಗಳಿಗೆ ಕಪ್ಪು ಪಟ್ಟಿಗಳನ್ನು ಬಳಿಯಲಾಗಿತ್ತು. ಅಷ್ಟಕ್ಕೂ ಈ ಪ್ರಕರಣ ಬಯಲಾಗಿದ್ದು ಹೇಗೆ ಎಂದರೆ, ಇಂಟರ್‌ನ್ಯಾಶನಲ್ ಗಾರ್ಡನ್ ಮುನಿಸಿಪಲ್ ಉದ್ಯಾನವನದಲ್ಲಿ ಚೂಪಾದ ಕಿವಿಗಳೊಂದಿಗೆ ವಿಚಿತ್ರವಾಗಿ ಕಾಣುತ್ತಿದ್ದ ಎರಡು ಝೀಬ್ರಾಗಳನ್ನು ವಿದ್ಯಾರ್ಥಿ ಮಹ್ಮೂದ್ ಸರ್ಹಾನ್ ಎಂಬವರು ಗಮನಿಸಿದರು. ಆ ಪ್ರಾಣಿಗಳಿಗೆ ಬಳಿಯಲಾಗಿದ್ದ ಕಪ್ಪು ಬಣ್ಣವು ಬಿಸಿ ವಾತಾವರಣದಲ್ಲಿ ಹರಡಲು ಆರಂಭಿಸಿತ್ತು. ಇದರಿಂದ ಸರ್ಹಾನ್ ಇನ್ನಷ್ಟು ಸಂಶಯಕ್ಕೊಳಗಾದರು.  ಬಳಿಕ ಅವರು ಆ ‘ಝೀಬ್ರಾ’ಗಳ ಚಿತ್ರವೊಂದನ್ನು ತೆಗೆದು ಜುಲೈ 21ರಂದು ಫೇಸ್‌ಬುಕ್‌ನಲ್ಲಿ ಹಾಕಿದರು. ಅದು ತಕ್ಷಣವೇ ವೈರಲ್ ಆಯಿತು. ಆದಾಗ್ಯೂ, ಸರ್ಹಾನ್ ನೋಡಿದ ಪ್ರಾಣಿಗಳು ನಿಜವಾದ ಝೀಬ್ರಾಗಳು ಎಂಬುದಾಗಿ ಪ್ರಾಣಿ ಸಂಗ್ರಹಾಲಯದ ನಿರ್ದೇಶಕ ಮುಹಮ್ಮದ್ ಸುಲ್ತಾನ್ ಹೇಳಿದ್ದಾರೆ.

Facebook Comments

Sri Raghav

Admin