ಕರುಣಾನಿಧಿ ಆರೋಗ್ಯ ಸುಧಾರಣೆಗೆ ಲಕ್ಷಾಂತರ ಜನರ ಪ್ರಾರ್ಥನೆ

ಈ ಸುದ್ದಿಯನ್ನು ಶೇರ್ ಮಾಡಿ

Karunanidhi--01

ಚೆನ್ನೈ, ಜು.28-ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಡಾ. ಎಂ. ಕರುಣಾನಿಧಿ (94) ಅವರು ಶೀಘ್ರ ಗುಣಮುಖರಾಗಲೆಂದು ಕಾರ್ಯಕರ್ತರು, ಬೆಂಬಲಿಗರು ಹಾಗೂ ಅಭಿಮಾನಿಗಳೂ ಸೇರಿದಂತೆ ಲಕ್ಷಾಂತರ ಮಂದಿ ಪ್ರಾರ್ಥಿಸುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಜ್ವರ ಮತ್ತು ಮೂತ್ರನಾಳ ಸೋಂಕಿನಿಂದ ಬಳಲುತ್ತಿರುವ ಅವರಿಗೆ ಚೆನ್ನೈನ ಗೋಪಾಲಪುರಂನಲ್ಲಿರುವ ತಮ್ಮ ನಿವಾಸದಲ್ಲೇ ಗುರುವಾರ ಸಂಜೆಯಿಂದ ಚಿಕಿತ್ಸೆ ಮುಂದುವರಿಸಲಾಗಿತ್ತು. ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ನಿನ್ನೆ ಮಧ್ಯರಾತ್ರಿ ರಕ್ತದೊತ್ತಡದಲ್ಲಿ ಗಣನೀಯ ಇಳಿಕೆಯಾಗಿ ಅವರ ಆರೋಗ್ಯದಲ್ಲಿ ಏರುಪೇರಾಯಿತು. ತಕ್ಷಣ ಅವರನ್ನು ಆಸ್ಪತೆಗೆ ದಾಖಲಿಸಲಾಯಿತು.
60 ವರ್ಷಗಳ ಕಾಲ ಶಾಸಕರಾಗಿ ಹಾಗೂ ಸುದೀರ್ಘಾವಧಿ ಡಿಎಂಕೆ ಸಾರಥಿಯಾಗಿ ಅವರು ರಾಜಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ.

Facebook Comments

Sri Raghav

Admin