ಬಸ್‍ಗಳು ಹಾಳಾಗಲು ಪಾಲಿಕೆ ರಸ್ತೆ ಕಾರಣ ಎಂದ ಬಿಎಂಟಿಸಿ ಕಾರ್ಯದರ್ಶಿಗೆ ಮೇಯರ್ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Mayor-BBMP--01
ಬೆಂಗಳೂರು, ಜು.28-ಬಿಎಂಟಿಸಿ ಬಸ್‍ಗಳು ಹಾಳಾಗಲು ಬಿಬಿಎಂಪಿ ರಸ್ತೆಗಳೇ ಕಾರಣ ಎಂದು ಎಲ್ಲಾ ಸುದ್ದಿ ಹರಡಿದ್ದೀರಿ. ಇದಕ್ಕೆ ನೀವೇ ಕಾರಣ ಕೊಡಿ ಎಂದು ಮೇಯರ್ ಸಂಪತ್‍ರಾಜ್ ಸಂಸ್ಥೆಯ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಸಭೆ ಪ್ರಾರಂಭವಾಗುತ್ತಿದ್ದಂತೆ ಪಾಲಿಕೆ ರಸ್ತೆಗಳಿಂದಲೇ ಬಿಎಂಟಿಸಿ ಬಸ್‍ಗಳು ಹಾಳಾಗುತ್ತಿವೆ. ಹಾಗಾಗಿ ವಿಶೇಷ ಸೆಸ್ ವಿಧಿಸಲು ಸಂಸ್ಥೆ ಮುಂದಾಗಿದೆ. ಈ ಬಗ್ಗೆ ಕಾರ್ಯದರ್ಶಿಗಳು ಮಾತನಾಡಬೇಕೆಂದು ಮೇಯರ್ ಆಗ್ರಹಿಸಿದಾಗ ಆ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಕಾರ್ಯದರ್ಶಿ ಚನ್ನಬಸಪ್ಪ ಹೇಳಿದರು.

ನೂರು ವಾರ್ಡ್ ಇದ್ದಾಗಲೂ ನಗರದಲ್ಲಿ 6 ಸಾವಿರ ಬಸ್‍ಗಳು ಸಂಚರಿಸುತ್ತಿದ್ದವು. ಈಗಲೂ 6 ಸಾವಿರ ಬಸ್‍ಗಳಿವೆ. ಡಬ್ಬಲ್ ಡೆಕ್ಕರ್ ಬಸ್ ಇರಬೇಕಾಗಿತ್ತು. ಇದರಿಂದ ಮಾಲಿನ್ಯ ಹಾಗೂ ಟ್ರಾಫಿಕ್ ಕಡಿಮೆಯಾಗುತ್ತಿತ್ತು ಎಂದು ಮೇಯರ್ ಹೇಳಿದರು. ಸದಸ್ಯ ಗುಣಶೇಖರ್ ಮಾತನಾಡಿ, ಬಿಎಂಟಿಸಿ ಅಷ್ಟೇ ಅಲ್ಲ, ಬಿಬಿಎಂಪಿಯೂ ನಷ್ಟದಲ್ಲಿದೆ. ರಸ್ತೆಗುಂಡಿಗಳನ್ನು ಮುಚ್ಚಿಸಲು ಬಿಎಂಟಿಸಿಯೇ ಹಣ ಕೊಡಲಿ. ಬಸ್‍ಗಳು ಜಾಹೀರಾತಿನಿಂದ ಹಣ ಮಾಡುತ್ತಿವೆ. ಆದರೆ ಅವು ಸಂಚರಿಸುವುದು ನಮ್ಮ ರಸ್ತೆಯಲ್ಲಿ ಆದ್ದರಿಂದ ಜಾಹಿರಾತು ತೆರಿಗೆಯನ್ನು ನಮಗೆ ನೀಡಲಿ ಎಂದು ಒತ್ತಾಯಿಸಿದರು.

ದೊಮ್ಮಲೂರು ವಾರ್ಡ್ ಸದಸ್ಯ ಲಕ್ಷ್ಮೀನಾರಾಯಣ,ಗುಣಶೇಖರ್, ಶಾಸಕಿ ಹಾಗೂ ಕೆ.ಆರ್.ಪುರ ವಾರ್ಡ್ ಸದಸ್ಯೆ ಪೂರ್ಣಿಮಾ,ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ ಬಹುತೇಕ ಸದಸ್ಯರು ಟ್ರಾಫಿಕ್ ಜಾಮ್,ಡಕೋಟ ಬಸ್‍ಗಳ ಕುರಿತು ಗಮನ ಸೆಳೆದರು.

Facebook Comments

Sri Raghav

Admin