ಬಿದನೂರು ಕೋಟೆಯ ಪಾಳುಬಿದ್ದ ಬಾವಿಯಲ್ಲಿ ಟಿಪ್ಪುಸುಲ್ತಾನ್ ಕಾಲದ 1000 ರಾಕೆಟ್ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Tipp[u--011

ಶಿವಮೊಗ್ಗ. ಜು.29 : ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಬಳಸಲು ಇರಿಸಿದ್ದು ಎನ್ನಲಾದ ಸುಮಾರು 1000 ಯುದ್ಧ ರಾಕೆಟ್ ಗಳು ಶಿವಮೊಗ್ಗದ ಬಿದನೂರು ಕೋಟೆಯ ಪಾಳುಬಿದ್ದ ಬಾವಿಯಲ್ಲಿ ಪತ್ತೆಯಾಗಿವೆ. ಈ ರಾಕೆಟ್ಗಳ ಒಳಗೆ ಮದ್ದು ತುಂಬಿ ಚಿಮ್ಮಿಸಿದರೆ ಸುಮಾರು ಒಂದೂವರೆ ಕಿ.ಮೀ. ದೂರದವರೆ ಚಿಮ್ಮಿ ಶತ್ರುಗಳನ್ನು ನಾಶಗೊಳಿಸುವ ಸಾಮರ್ಥ್ಯ ಹೊಂದಿವೆ.  ಶಿವಮೊಗ್ಗ ಜಿಲ್ಲೆಯ ನಾಗರದಲ್ಲಿನ ಬಿದನೂರು ಕೋಟೆಯಲ್ಲಿ 1000 ಬಳಸದ ರಾಕೆಟ್, ಪೌಡರ್ ಮತ್ತು ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು ಪತ್ತೆಯಾಗಿರುವುದನ್ನು ಕರ್ನಾಟಕ ರಾಜ್ಯ ಭೂವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ನಾಯಕ, ದೃಢಪಡಿಸಿದ್ದಾರೆ.

2002ರಲ್ಲಿ ಇದೇ ಪ್ರದೇಶದಲ್ಲಿ 160 ತುಕ್ಕುಹಿಡಿದ ರಾಕೆಟ್ ಗಳು ಪತ್ತೆಯಾಗಿತ್ತು. ಸುಮಾರು 5 ವರ್ಷಗಳ ನಂತರ ಇದೇ ಪ್ರದೇಶದಲ್ಲಿ 1000 ರಾಕೆಟ್ ಪತ್ತೆಯಾಗಿವೆ. ಈ ಕೋಟೆಯಲ್ಲಿ ಇನ್ನಷ್ಟು ರಾಕೆಟ್ ಗಳು ಇರುವ ಶಂಕೆ ಇದ್ದು, ಉತ್ಖನನ ಕಾರ್ಯ ಪ್ರಗತಿಯಲ್ಲಿದೆ. ಉತ್ಖನನ ತಜ್ಞರು, ಸಂಶೋಧಕರು ಹಾಗೂ ಸಿಬ್ಬಂದಿ ಒಳಗೊಂಡ 15 ಜನರ ತಂಡ ಕಳೆದ ಮೂರು ದಿನಗಳಿಂದ ಶೋಧ ಕಾರ್ಯ ನಡೆದಿತ್ತು. ಪಾಳುಬಾವಿಯಲ್ಲಿ ಪೌಡರ್ ವಾಸನೆ ಬರುತ್ತಿದ್ದರಿಂದ ಆ ಭಾಗದಲ್ಲಿ ತಪಾಸಣೆ ಮಾಡಿದಾಗ ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಕೆಟ್ ಗಳು ಪತ್ತೆಯಾಗಿವೆ.

ಪ್ರತಿಯೊಂದು ರಾಕೆಟ್ ಗಳು ಭಿನ್ನ ಅಳತೆಯಲ್ಲಿವೆ. ಕೆಲವು 23-24 ಸೆಂಟಿ ಮೀಟರ್ ಇನ್ನು ಕೆಲವು 14-15 ಸೆಂಟಿ ಮೀಟರ್ ಉದ್ದವಿದೆ. ಇವುಗಳನ್ನು ಸುರಕ್ಷಿತ ಸ್ಥಳದಲ್ಲಿ ರಕ್ಷಿಸಿಡುವ ಉದ್ದೇಶದಿಂದ ಇಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ರಾಕೆಟ್ ಗಳನ್ನು ಶಿವಮೊಗ್ಗದ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ.

Facebook Comments

Sri Raghav

Admin