ಸಚಿವರ ಹೆಸರಲ್ಲಿ ಅಮಾಯಕರಿಗೆ ಪಂಗನಾಮ ಹಾಕಿ ಸಿಕ್ಕಿಬಿದ್ದ ಖತರ್ನಾಕ್ ವಂಚಕ..!

ಈ ಸುದ್ದಿಯನ್ನು ಶೇರ್ ಮಾಡಿ

arrested
ಬೆಂಗಳೂರು, ಜು.29- ಪ್ರಭಾವಿ ಸಚಿವರ ಹೆಸರು ಬಳಸಿಕೊಂಡು ಅಮಾಯಕ ಯುವಕರಿಂದ ಹಣ ವಸೂಲಿ ಮಾಡಿದ್ದ ಆರೋಪದಲ್ಲಿ ಮಂಜುನಾಥ್ ಎಂಬಾತನನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಉದ್ಯೊಗ ಕೊಡಿಸುತ್ತೇನೆ ಮತ್ತು ಕೆಪಿಎಸ್‍ಸಿ ಕೋಟಾದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಆರೋಪಿ ಅಮಾಯಕ ಯುವಕರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ. ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೆ.ಮಂಜುನಾಥ್ ಹಾಗೂ ವೆಂಕಟೇಶ್ ಎಂಬ ಯುವಕರಿಂದ ಹಣ ಪಡೆದುಕೊಂಡಿದ್ದ ಮಂಜುನಾಥ್, ಹಣ ಹಿಂದಿರುಗಿಸುವಂತೆ ಕೇಳಿದಾಗ ಅವರಿಗೆ ಬೆದರಿಕೆ ಹಾಕಿದ್ದ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ವೆಂಕಟೇಶ್ ಅವರು 15 ಲಕ್ಷ ರೂಪಾಯಿಯನ್ನು ಮಂಜುನಾಥ್‍ಗೆ ನೀಡಿದ್ದರು. ಮಾತ್ರವಲ್ಲ ಸುಧಾರಾಣಿ ಎಂಬವರ ಬ್ಯಾಂಕ್ ಖಾತೆ ಸಂಖ್ಯೆ ನೀಡಿ ಆ ಖಾತೆಗೂ ಹಣ ನೀಡು ವಂತೆ ಆರೋಪಿ ಸೂಚಿಸಿದ್ದ. ಅದರಂತೆ ವೆಂಕಟೇಶ್ ಹಣ ಪಾವತಿಸಿದ್ದರು.

ಇದೇ ರೀತಿ ಕೆ.ಮಂಜುನಾಥ್ ಎಂಬ ಯುವಕನಿಂದಲೂ ಮಂಜುನಾಥ್ ಹಣ ಪಡೆದುಕೊಂಡಿದ್ದ.  ಕೆ.ವೆಂಕಟೇಶ್ ಅವರಿಗೆ ನಕಲಿ ನೇಮಕಾತಿ ಪತ್ರ ಮತ್ತು ಲೆಡರ್‍ಹೆಡ್ ನೀಡಿದ್ದ. ಇದನ್ನು ನಂಬಿದ್ದ ವೆಂಕಟೇಶ್ ಕೆಪಿಎಸ್‍ಸಿ ಕಚೇರಿಗೆ ಹೋಗಿ ವಿಚಾರಿಸಿದಾಗ ತಾನು ವಂಚನೆಗೊಳಗಾಗಿರುವುದು ತಿಳಿದುಬಂದಿದೆ.
ವಂಚನೆಗೊಳಗಾದ ವೆಂಕಟೇಶ್ ಮತ್ತು ಕೆ.ಮಂಜುನಾಥ್ ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿ ಮಂಜುನಾಥ್‍ನನ್ನು ಬಂಧಿಸಿದ್ದಾರೆ.

Facebook Comments

Sri Raghav

Admin