9 ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

IAS-IPS-IFS

ಬೆಂಗಳೂರು, ಜು.29- ಸದ್ದು ಗದ್ದಲವಿಲ್ಲದೆ 9 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ವಿಶೇಷವೆಂದರೆ ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳ ಸಭೆ ನಡೆಸುವ ನಡುವೆಯೇ ಇಂದು ಹಲವು ಜಿಲ್ಲೆಗಳ ಡಿಸಿಗಳನ್ನು ವರ್ಗಾವಣೆ ಮಾಡಿ ಇಂದು ಆದೇಶ ಹೊರಡಿಸಿರುವುದು ಕುತೂಹಲ ಕೆರಳಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳು ಹಾಗೂ ಸ್ಥಳ ಈ ಕೆಳಕಂಡಂತಿದೆ.

ಎಸ್.ಪಾಲಯ್ಯ-ಆಯುಕ್ತರು,ಕಾರ್ಮಿಕ ಇಲಾಖೆ,
ಜೆ.ಮಂಜುನಾಥ್-ಜಿಲ್ಲಾಧಿಕಾರಿ,ಕೋಲಾರ
ಕುರ್ಮಾ ರಾವ್-ಜಿಲ್ಲಾಧಿಕಾರಿ,ಯಾದಗೀರ್
ಅನಿರುದ್ಧ್ ಸರ್ವನ್-ಜಿಲ್ಲಾಧಿಕಾರಿ ,ಚಿಕ್ಕಬಳ್ಳಾಪುರ
ಡಾ.ರಾಕೇಶ್‍ಕುಮಾರ್-ಜಿಲ್ಲಾಧಿಕಾರಿ, ತುಮಕೂರು
ಮೊಹಮದ್ ರೋಷನ್-ಉಪ ಕಾರ್ಯದರ್ಶಿ-2 ಹಾಗೂ ಸಿಇಒ ಉತ್ತರ ಕನ್ನಡ ಜಿಲ್ಲಾ ಪಂಚಾಯ್ತಿ, ಕಾರವಾರ
ಡಾ.ಎಸ್.ಶಿವಶಂಕರ-ಸಿಇಒ ಮತ್ತು ಕಾರ್ಯಕಾರಿ ಸದಸ್ಯ ಕೆಐಎಡಿಬಿ
ಕಾರೇಗೌಡ -ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಶ್ರೀನಿವಾಸ್-ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ.

 

Facebook Comments

Sri Raghav

Admin