ಕಾಂಗ್ರೆಸ್‍ ಬಂಡಾಯ ಅಭ್ಯರ್ಥಿಯಾಗಿ ಸವದತ್ತಿಯಿಂದ ಸ್ಪರ್ಧಿಸಿದ್ದ ಆನಂದ್ ಚೋಪ್ರಾ ಹತ್ಯೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Anand-CHopra--01
ಬೆಳಗಾವಿ, ಜು.29-ಸವದತ್ತಿ ಕ್ಷೇತ್ರದಿಂದ ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಆನಂದ್ ಚೋಪ್ರಾ ಹತ್ಯೆಗೆ ದುಷ್ಕರ್ಮಿಗಳು ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಆನಂದ್‍ಚೋಪ್ರಾ ನಿನ್ನೆ ರಾತ್ರಿ ಸವದತ್ತಿಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ದುಷ್ಕರ್ಮಿಗಳು ಆತನ ಮೇಲೆ ಲಾಂಗ್ ಮತ್ತು ರಾಡ್‍ಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಕುತ್ತಿಗೆಗೆ ಹಾಗೂ ತಲೆಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಆನಂದ್ ಚೋಪ್ರಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ ಸವದತ್ತಿಯ ಹೂಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದರು ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನಂದ್ ಚೋಪ್ರಾ ಕೇವಲ 5 ಸಾವಿರ ಮತಗಳಿಂದ ಸೋತಿದ್ದರು. ಈತನ ಮೇಲೆ ನಡೆದಿರುವ ಹಲ್ಲೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸ್ಥಳಕ್ಕೆ ಭೇಟಿ ನೀಡಿದ ಎಸ್‍ಪಿ ಸುಧೀರ್‍ಕುಮಾರ್‍ರೆಡ್ಡಿ ಪರಿಶೀಲನೆ ನಡೆಸಿ ತನಿಖೆಗೆ ಮುಂದಾಗಿದ್ದಾರೆ.

Facebook Comments

Sri Raghav

Admin