ಆಟೋ ಮೇಲೆ ಕಾಡಾನೆ ದಾಳಿ, ಪ್ರಯಾಣಿಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Auto--01
ಮಡಿಕೇರಿ,ಜು.29- ಪ್ರಯಾಣಿಕರಿದ್ದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಸಿದ್ದರಾಪುರ ಸಮೀಪದ ಆಲಿತೋಪು ಗ್ರಾಮದಲ್ಲಿ ಜರುಗಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ದಿಢೀರನೇ ದಾಳಿ ನಡೆಸಿದ ಕಾಡಾನೆ, ತನ್ನ ಸೊಂಡಿಲಿನಿಂದ ಆಟೋವನ್ನು 20 ಅಡಿ ದೂರಕ್ಕೆ ಎತ್ತೊಗೆದಿದೆ. ಪರಿಣಾಮ ಆಟೋ ನಜ್ಜುಗುಜ್ಜಾಗಿದೆ.

ಆಟೋದಲ್ಲಿದ್ದ ಚಾಲಕ ಮಹಮ್ಮದ್, ಪ್ರಯಾಣಿಕರಾದ ಸೇತುರಾಮ, ಬಾಲಕೃಷ್ಣ ಓಡಿಹೋಗುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಬಜೆಕೊಲ್ಲಿ ಗ್ರಾಮದಿಂದ ಸಿದ್ಧಾಪುರಕ್ಕೆ ತೆರಳುವ ಮಾರ್ಗದಲ್ಲಿ ಈ ಕಾಡಾನೆ ಮೊದಲಿಗೆ ಕಾರೊಂದನ್ನು ಬೆನ್ನಟ್ಟಿಕೊಂಡು ಹೋಗಿದೆ. ಆದರೆ ಕಾರನ್ನು ಹಿಡಿಯಲು ಸಾಧ್ಯವಾಗದಿದ್ದಾಗ ಇದೇ ಮಾರ್ಗದಲ್ಲಿ ಬರುತ್ತಿದ್ದ ಆಟೋ ಮೇಲೆ ದಾಳಿ ಮಾಡಿದೆ.

Facebook Comments

Sri Raghav

Admin