ಇಂದಿನ ಪಂಚಾಗ ಮತ್ತು ರಾಶಿಫಲ (29-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತರ್ಕಜ್ಞಾನವುಳ್ಳ ಜಾಣರು ಎಷ್ಟು ಪ್ರಯತ್ನದಿಂದ ಒಂದು ವಿಷಯವನ್ನು ಊಹಿಸಿ ನಿಲ್ಲಿಸಿರಲಿ, ಇನ್ನೂ ಹೆಚ್ಚಿನ ಬುದ್ಧಿಶಾಲಿಗಳು ಅದನ್ನು ಇನ್ನೊಂದು ಬಗೆಯಲ್ಲಿ ಊಹಿಸಿ ಉಪಪಾದನೆ ಮಾಡಿಬಿಡುತ್ತಾರೆ. -ವಾಕ್ಯಪದೀಯ

Rashi
29.07.2018 ಭಾನುವಾರ
ಸೂರ್ಯ ಉದಯ ಬೆ.06.05 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ರಾ.07.59 / ಚಂದ್ರ ಅಸ್ತ ಬೆ.07.05
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಿತೀಯಾ (ದಿನಪೂರ್ತಿ)
ನಕ್ಷತ್ರ: ಧನಿಷ್ಠಾ (ದಿನಪೂರ್ತಿ) / ಯೋಗ: ಆಯುಷ್ಮಾನ್ (ಮ.01.00)
ಕರಣ: ತೈತಿಲ (ಸಾ.05.32) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 14

ಇಂದಿನ ವಿಶೇಷ:

ರಾಶಿ ಭವಿಷ್ಯ : 

ಮೇಷ : ಮುಂದಾಗುವ ಅನಾರೋಗ್ಯವನ್ನು ತಡೆಯಿರಿ. ಹಿರಿಯರ ಆಶೀರ್ವಾದದಿಂದ ಯಶಸ್ಸು ಸಿಗಲಿದೆ
ವೃಷಭ : ನಿಮ್ಮನ್ನು ವಿರೋಧಿಸುತ್ತಿರುವವರು ಮನೆಗೆ ಬರುವ ಸಾಧ್ಯತೆ ಇದೆ. ಧನಲಾಭವಾಗಲಿದೆ
ಮಿಥುನ: ಹಲವು ದಿನಗಳಿಂದ ಬಯಸುತ್ತಿದ್ದ ವಸ್ತು ಗಳ ಖರೀದಿಯಿಂದ ಮನಸ್ಸಿಗೆ ಸಂತೋಷವಾಗಲಿದೆ
ಕಟಕ : ಪೂರಕ ವಾತಾವರಣ ವಿರುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ
ಸಿಂಹ: ಮಿತ್ರರಲ್ಲಿ ಭಿನ್ನಮತ ಉಂಟಾಗಿ ಅವರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಗಳಿವೆ
ಕನ್ಯಾ: ಹೊರಹೋಗುವ ಮುನ್ನ ಯಾವುದೇ ಅಮೂಲ್ಯ ವಸ್ತು ಇಲ್ಲವೆಂದು ಖಚಿತಪಡಿಸಿಕೊಳ್ಳಿ
ತುಲಾ: ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
ವೃಶ್ಚಿಕ: ದೂರ ಪ್ರಯಾಣ ಮುಂದೂಡುವುದು ಒಳಿತು
ಧನುಸ್ಸು: ನಿರೀಕ್ಷಿಸಿದ ಹಲವು ಕಾರ್ಯಗಳು ಈಡೇರಲಿವೆ
ಮಕರ: ಶುಭವಾರ್ತೆಯೊಂದು ಕಿವಿಗೆ ಬೀಳಲಿದೆ
ಕುಂಭ: ವಿಶೇಷ ಅತಿಥಿಗಳ ಆಗಮನವಾಗಲಿದೆ
ಮೀನ: ಕೌಟುಂಬಿಕ ಕಲಹ ನಿವಾರಣೆಯಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin