ಇಂಡೋನೇಷಿಯಾದ ಲೋಬೋಕ್‍ನಲ್ಲಿ ಭೂಕಂಪ, 10ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Untitled-1indonasia

ಲೊಂಬೊಕ್, ಜು.29- ಪ್ರವಾಸಿಗರ ನೆಚ್ಚಿನ ತಾಣವಾದ ಇಂಡೋನೇಷಿಯಾದ ಲೋಬೋಕ್‍ನಲ್ಲಿ ಭೂಕಂಪನ ಸಂಭವಿಸಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿದ್ದಾರೆ.  ರಿಕ್ಟರ್ ಮಾಪನದಲ್ಲಿ 6.4ರ ತೀವ್ರತೆಯ ಕಂಪನ ದಾಖಲಾಗಿದ್ದು , ದ್ವೀಪ ಪ್ರದೇಶವಾದ ಈ ಪ್ರದೇಶದಲ್ಲಿನ ಬಹುತೇಕ ಮನೆಗಳು ಕುಸಿದಿವೆ ಎಂದು ಮೂಲಗಳು ತಿಳಿಸಿವೆ.

ವಾರಾಂತ್ಯದ ರಜೆಯನ್ನು ಸಂಭ್ರಮದಿಂದ ಕಳೆಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಕಳೆದ ರಾತ್ರಿ ಈ ದುರ್ಘಟನೆ ನಡೆದಿದೆ ಎಂದು ಇಂಡೋನೇಷಿಯಾದ ವಿಪತ್ತು ನಿರ್ವಹಣಾ ಕೇಂದ್ರದ ವಕ್ತಾರ ಪುರ್ವೊ ನುಗ್ರೋ ತಿಳಿಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಬಹುದು. ನಮಗೆ ಸರಿಯಾಗಿ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin