ವೇಶ್ಯಾವಾಟಿಕೆ ನಡೆಸುತ್ತಿದ್ದ ಬ್ಯೂಟಿಪಾರ್ಲರ್’ಳಿಂದ ಹಣ ಪಡೆಯುತ್ತಿದ್ದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Prostitution

ಮೈಸೂರು, ಜು.29-ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಪೊಲೀಸರ ನರವಿನೊಂದಿಗೆ ಕೆಲವು ಬ್ಯೂಟಿಪಾರ್ಲರ್‍ಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಕಳೆದ ರಾತ್ರಿ ನಡೆದ ಹಿರಿಯ ಅಧಿಕಾರಿಗಳ ದಾಳಿಯಲ್ಲಿ ವಶಪಡಿಸಿಕೊಂಡ ಡೈರಿಯಲ್ಲಿ ಪೊಲೀಸರಿಗೆ ಹಣ ಪಾವತಿಸಿರುವ ವಿಷಯ ಬಹಿರಂಗಗೊಂಡಿದೆ.

ಮಸಾಜ್ ಮತ್ತು ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವಿಜಯನಗರದಲ್ಲಿ ವ್ಯಾಪಕವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ಒಡನಾಡಿ ಸೇವಾಸಂಸ್ಥೆ ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ್ ರಾವ್ ಅವರಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಕಳೆದ ರಾತ್ರಿ ವಿಜಯನಗರದ ಎರಡು ಕಡೆಗಳಲ್ಲಿ ಎಸಿಪಿ ಗಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಎರಡೂ ಬ್ಯೂಟಿಪಾರ್ಲರ್‍ಗಳ ಮಾಲಕಿ ಹೇಮಾವತಿ, ಮಧ್ಯವರ್ತಿ ಸಿದ್ದು ಸೇರಿ 5 ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು, ನಾಲ್ಕು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಈ ವೇಳೆ ಬ್ಯೂಟಿಪಾರ್ಲರ್‍ಗಳಲ್ಲಿ ದೊರೆತಿರುವ ಡೈರಿಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಯ ಹೆಸರು ನಮೂದಿಸಿ ಹಣ ಪಾವತಿಸಿರುವ ವಿಷಯ ಬೆಳಕಿಗೆ ಬಂದಿದೆ. ವೇಶ್ಯಾವಾಟಿಕೆ ದಂಧೆಯಲ್ಲಿ ಒಂದು ಬಾರಿ ಭಾಗವಹಿಸಿ ಮತ್ತೆ ದಂಧೆಯಲ್ಲಿ ತೊಡಗಲು ನಿರಾಕರಿಸುವ ಮಹಿಳೆಯರನ್ನು ಹೆದರಿಸಲಾಗುತ್ತಿತ್ತು. ಈ ಹಿಂದೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಚಿತ್ರೀಕರಣವನ್ನು ತೋರಿಸಿ ಅವರನ್ನು ಬಲವಂತವಾಗಿ ಪಾಲ್ಗೊಳ್ಳುವಂತೆ ಬ್ಲಾಕ್‍ಮೇಲ್ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಡಿಸಿಪಿ ಇಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Facebook Comments

Sri Raghav

Admin