ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಾಮುಕರಿಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrested
ಕಲಬುರ್ಗಿ, ಜು.29- ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ ಕಾಮುಕರಿಬ್ಬರನ್ನು ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಪೊಲೀಸರು ಬಂಧಿಸಿದ್ದಾರೆ. ದಂಡೋತಿ ಗ್ರಾಮದ ಮಲ್ಲಿಕಾರ್ಜುನ, ಗಜೇಂದ್ರ (26) ಬಂಧಿತ ಆರೋಪಿಗಳು. ಜು.26ರಂದು ಈ ಆರೋಪಿಗಳಿಬ್ಬರು 65 ವರ್ಷದ ವೃದ್ಧೆಯನ್ನು ಕರೆದೊಯ್ದು ಅತ್ಯಾಚಾರವೆಸಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಮಾಡಬೂಳ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

Facebook Comments

Sri Raghav

Admin