Shocking : ಬೆಂಗಳೂರಲ್ಲಿ ರಸ್ತೆ ಅಪಘಾತಕ್ಕೆ 4 ವರ್ಷದಲ್ಲಿ 3250 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಬೆಂಗಳೂರು, ಜು.30- ಅಪಘಾತ ತಪ್ಪಿಸಲು ಮತ್ತು ಸಾರ್ವಜನಿಕರು ಸಂಚಾರ ನಿಯಮ ಪಾಲಿಸುವಂತೆ ಮಾಡಲು ಸಂಚಾರ ಪೊಲೀಸರು ನಿರಂತರ ಪ್ರಯತ್ನ ನಡೆಸುತ್ತಿರುವ ಹೊರತಾಗಿಯೂ ನಗರದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಸ್ತೆ ಅಪಘಾತಕ್ಕೆ 3250 ಮಂದಿ ಬಲಿಯಾಗಿದ್ದಾರೆ. ಈ ಅವಧಿಯಲ್ಲಿ ಒಟ್ಟು 18,694 ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ನೀಡಿರುವ ಅಂಕಿಅಂಶದಲ್ಲಿ ಈ ದುಃಖಕರ ಅಂಶ ಬೆಳಕಿಗೆ ಬಂದಿದೆ.

ಕಾರು ಅಪಘಾತದಲ್ಲಿ 511, ಲಾರಿ ಅಪಘಾತದಲ್ಲಿ 477 ಹಾಗೂ ದ್ವಿಚಕ್ರ ವಾಹನ ಅಪಘಾತಗಳಲ್ಲಿ 352 ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು 352 ಮಂದಿ ಮೃತಪಟ್ಟಿರುವುದು ಅಂಕಿಅಂಶದಲ್ಲಿ ತಿಳಿದುಬಂದಿದೆ.2014ರಲ್ಲಿ ಒಟ್ಟು 711 ಅಪಘಾತ ಸಂಭವಿಸಿ 737 ಮಂದಿ ಸಾವನ್ನಪ್ಪಿದರೆ, 2015ರಲ್ಲಿ 714 ಅಪಘಾತ ಸಂಭವಿಸಿ 740 ಮಂದಿ ಬಲಿಯಾಗಿದ್ದಾರೆ. 2016ರಲ್ಲಿ ನಡೆದ 754 ಅಪಘಾತದಲ್ಲಿ 793 ಮಂದಿ, 2017ರಲ್ಲಿ 609 ಅಪಘಾತಗಳಲ್ಲಿ 642 ಮಂದಿ ಬಲಿಯಾಗಿದ್ದಾರೆ.

2018 ಜೂನ್‍ವರೆಗೆ 330 ಅಪಘಾತ ಸಂಭವಿಸಿದ್ದು, 338 ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ.  ನಗರದಲ್ಲಿ ದ್ವಿಚಕ್ರ ವಾಹನ ಅಪಘಾತ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ತನಿಖೆಯಿಂದ ಸಾಬೀತಾಗಿದೆ. ನಗರದ ಜನದಟ್ಟಣೆ ಪ್ರದೇಶದಲ್ಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಕಾರು ಮತ್ತು ಲಾರಿ ಚಾಲಕರು ಅತಿವೇಗ ಮತ್ತು ಅಜಾಗರೂಕತೆಯ ವಾಹನ ಚಲಾಯಿಸುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಅಪಘಾತದ ಪ್ರಮಾಣ ಕಡಿಮೆಮಾಡಬಹುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ಹೇಳುತ್ತಾರೆ.

Facebook Comments

Sri Raghav

Admin