ಒಮ್ಮೆಗೆ 8 ಮರಿಗಳಿಗೆ ಜನ್ಮ ನೀಡಿ ಮೆಕ್ಸಿಕನ್ನರ ಮನ ಗೆದ್ದ ತೋಳ..!

ಈ ಸುದ್ದಿಯನ್ನು ಶೇರ್ ಮಾಡಿ

ds

ಮೆಕ್ಸಿಕೋ ವುಲ್ಫ್ ಜಾತಿಯ ತೋಳಗಳು ಅಪಾಯದ ಅಂಚಿನಲ್ಲಿವೆ. ಇವುಗಳ ಸಂತತಿ ಕ್ಷೀಣಿಸುತ್ತಿರುವ ಆತಂಕದ ನಡುವೆ ಮೆಕ್ಸಿಕೋ ಸಿಟಿಯಲ್ಲಿ ಈ ಪ್ರಜಾತಿಯ ಎಂಟು ತೋಳದ ಮರಿಗಳು ಜನಿಸಿರುವುದು ಪ್ರಾಣಿ ಪ್ರಿಯರಿಗೆ ಖುಷಿ ನೀಡಿದೆ. ಬನ್ನಿ ಈ ತೋಳದ ಮರಿಗಳ ದರ್ಶನ ಮಾಡೋಣ..ಮೆಕ್ಸಿಕೋ ಸಿಟಿಯ ಲಾಸ್ ಕೊಯೊಟೆಸ್ ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಇಲ್ಲಿನ ಪರ್ಲ್ ಎಂಬ ಹೆಸರಿನ ಹೆಣ್ಣು ತೋಳ ಎಂಟು ಮರಿಗಳಿಗೆ ಜನ್ಮ ನೀಡಿದೆ. ಇವುಗಳಲ್ಲಿ ಅರು ಗಂಡು ಮತ್ತು ಎರಡು ಹೆಣ್ಣು ಮರಿಗಳು.

ds-1

ಸಾಮಾನ್ಯ ಸಂಖ್ಯೆಗಿಂತ ಹೆಚ್ಚಿನ ತೋಳಗಳು ಜನಿಸಿರುವುದು ಈಗ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ತೋಳಗಳು ಸಾಮಾನ್ಯವಾಗಿ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಎಂಟು ಮರಿಗಳು ಹುಟ್ಟಿರುವುದು ಅಚ್ಚರಿಯ ಸಂಗತಿ. ಮೆಕ್ಸಿಕೋದ ಮೃಗಾಲಯಗಳಲ್ಲಿ ಒಟ್ಟು 367 ಮೆಕ್ಸಿಕನ್ ವುಲ್ಫ್‍ಗಳಿವೆ ಎನ್ನುತ್ತಾರೆ ಝೂ ನಿರ್ದೇಶಕಿ ಕ್ಲಾಡಿಯಾ ಲೆವಿ. 1989ರಿಂದ ಇಲ್ಲಿಯವರೆಗೆ ಜನಿಸಿದ ತೋಳಗಳ ಸಂಖ್ಯೆ 150.  ಈ ತೋಳಗಳನ್ನು ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿದೆ. ಮೆಕ್ಸಿಕೋ ತೋಳಗಳು ಬೇಟೆ, ಅರಣ್ಯ ನಾಶ ಮತ್ತು ರೇಬಿಸ್ ಹರಡುತ್ತವೆ ಎಂಬ ಆತಂಕದಿಂದ ಕೊಲ್ಲಲ್ಪಡುತ್ತಿವೆ.

ds-2

Facebook Comments