ಬಸ್‍ನಲ್ಲಿ ಪ್ರಯಾಣಿಸಿ ನೌಕರ-ಸಿಬ್ಬಂದಿ-ಪ್ರಯಾಣಿಕರ ಸಮಸ್ಯೆ ಆಲಿಸಿದ ಸಾರಿಗೆ ಸಚಿವರು

ಈ ಸುದ್ದಿಯನ್ನು ಶೇರ್ ಮಾಡಿ

Bus--01
ಹುಬ್ಬಳ್ಳಿ, ಜು.30-ನಗರ ಸಾರಿಗೆ ಬಸ್‍ನಲ್ಲಿ ಸಂಚರಿಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸಾರಿಗೆ ನೌಕರರ ಸಮಸ್ಯೆ ಆಲಿಸಿದರು. ನಗರದ ಸಿಬಿಟಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ನಗರ ಸಾರಿಗೆ ಬಸ್‍ನಲ್ಲಿ ಟಿಕೆಟ್ ಪಡೆದು ಪ್ರಯಾಣ ಬೆಳೆಸಿದ ಸಚಿವರು, ಬಸ್ ಚಾಲಕರು, ನಿರ್ವಾಹಕರ ಜೊತೆಗೆ ಪ್ರಯಾಣಿಕರ ಸಮಸ್ಯೆಗಳ ಬಗ್ಗೆ ಖುದ್ದಾಗಿ ಕೇಳಿ ತಿಳಿದುಕೊಂಡರು.

WhatsApp Image 2018-07-30 at 11.08.20 AM

ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು ಸಮಸ್ಯೆಗಳ ಬಗೆಹರಿಸುವಲ್ಲಿ ಕ್ರಮವಹಿಸುವುದಾಗಿ ಪ್ರಯಾಣಿಕರಿಗೆ ಭರವಸೆ ನೀಡಿದರು. ಹುಬ್ಬಳ್ಳಿ-ಧಾರವಾಡದ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ರಾಜಣ್ಣ ಕೊರವಿ, ಅಧಿಕಾರಿಗಳು ಇಂದು ಸಚಿವರೊಂದಿಗೆ ಬಸ್‍ನಲ್ಲಿ ತೆರಳಿದರು.

WhatsApp Image 2018-07-30 at 11.08.15 AM WhatsApp Image 2018-07-30 at 11.08.08 AM

Facebook Comments

Sri Raghav

Admin