ತೆರೆದ ಶೌಚಗುಂಡಿಗೆ ಬಿದ್ದು ಸಾವನ್ನಪ್ಪಿದ ಹಸು

ಈ ಸುದ್ದಿಯನ್ನು ಶೇರ್ ಮಾಡಿ

Cow

ಚಿತ್ರದುರ್ಗ,ಜು.31-ತೆರೆದ ಶೌಚದ ಗುಂಡಿಗೆ ಬಿದ್ದು ಹಸು ಸಾವನ್ನಪ್ಪಿರುವ ಘಟನೆ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದ್ಯಾಮಣ್ಣ ಎಂಬುವರ ಮನೆ ಮುಂದೆ ಶೌಚಾಲಯ ನಿರ್ಮಾಣಕ್ಕಾಗಿ ಪಿಟ್ ಗುಂಡಿ ತೋಡಲಾಗಿದ್ದು, ಅದರ ಮೇಲೆ ಯಾವುದೇ ಹಾಸುಗಲ್ಲುಗಳನ್ನು ಹಾಕಿರಲಿಲ್ಲ.  ಹಲವು ಬಾರಿ ಗ್ರಾಮಸ್ಥರು ಗುಂಡಿ ಮುಚ್ಚುವಂತೆ ತಿಳಿಸಲಾಗಿದ್ದರೂ ದ್ಯಾಮಣ್ಣ ನಿರ್ಲಕ್ಷ್ಯ ವಹಿಸಿದ್ದರು. ಇದನ್ನು ಗಮನಿಸದೆ ಬಂದ ಹಸುವೊಂದು 3 ಅಡಿ ಅಗಲ, 6 ಅಡಿ ಆಳವಿರುವ ಶೌಚಾಲಯದ ಗುಂಡಿಗೆ ಬಿದ್ದಿದೆ. ಹಸುವಿನ ಚೀರಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಹಸುವನ್ನು ರಕ್ಷಿಸಲು ಪ್ರಯತ್ನಿಸುವಲ್ಲಿ, ಮೂಕ ಪ್ರಾಣಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು.

Facebook Comments

Sri Raghav

Admin