ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಡೆತ್‍ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Death-Note--01

ಚಿತ್ರದುರ್ಗ, ಜು.31- ಆಸ್ತಿ ವಿವಾದದಲ್ಲಿ ಮನನೊಂದು ಡೆತ್‍ನೋಟ್ ಬರೆದಿಟ್ಟು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಳ್ಳಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಮೃತ ರೈತ ನಾಗರಾಜ್ (59) ಎಂದು ತಿಳಿದುಬಂದಿದೆ.  ಬಳ್ಳಿಕಟ್ಟೆ ಗ್ರಾಮದಲ್ಲಿ ಸುಮಾರು ಎರಡೂವರೆ ಎಕರೆ ಜಮೀನಿದ್ದು, ಇತ್ತೀಚೆಗೆ ಇವರ ನಾಲ್ವರು ಸಹೋದರಿಯರು ಪಾಲು ಕೇಳಿದ್ದರು. ಇದರಿಂದ ಸಾಕಷ್ಟು ರಾಜಿ-ಪಂಚಾಯ್ತಿ ಕೂಡ ನಡೆದಿತ್ತು.

ಸಹೋದರಿಯರು ಕೋರ್ಟ್ ಮೆಟ್ಟಿಲೇರಿದ್ದರಿಂದ ಮನನೊಂದಿದ್ದ ಆತ ಕಳೆದ ರಾತ್ರಿ ತನ್ನ ಜಮೀನಿಗೆ ತೆರಳಿ ಅಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭರಮಸಾಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‍ನೋಟ್‍ನಲ್ಲಿ ಸಂಬಂಧಿಕರ ಬಿರುಕು ಹಾಗೂ ಸಹೋದರಿಯರ ವರ್ತನೆಯಿಂದ ಮನನೊಂದಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin