ಹುಬ್ಬಳ್ಳಿಯಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು, ಸಂಚಾರ ವ್ಯತ್ಯಯ

ಈ ಸುದ್ದಿಯನ್ನು ಶೇರ್ ಮಾಡಿ

Goods-Trin--01

ಹುಬ್ಬಳ್ಳಿ. ಜು.31 : ಹುಬ್ಬಳ್ಳಿ ರೈಲು ‌ನಿಲ್ದಾಣದ ಸೌಥ್ ಬ್ಲಾಕ್ ನಲ್ಲಿ ಪೆಟ್ರೋಲ್ ಸಾಗಿಸುತ್ತಿದ್ದ ಗೂಡ್ಸ್ ರೈಲೊಂದು ಹಳಿ ತಪ್ಪಿ, ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಹಾಸನದಿಂದ ಇಲ್ಲಿನ ನವಲೂರಿನಲ್ಲಿರುವ ಇಂಡಿಯನ್ ಆಯಿಲ್ ‌ಕಾರ್ಪೋರೇಶನ್ಗೆ ಪೆಟ್ರೋಲ್ ಸಾಗಿಸುವಾಗ ಗೂಡ್ಸ್ ರೈಲಿನ ‌ನಾಲ್ಕು ಬೋಗಿಗಳು ಹಳಿ ತಪ್ಪಿವೆ.‌ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ರೈಲು ಹಳಿ ತಪ್ಪಿದ್ದರಿಂದ ಐದಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ.  ಅರಸಿಕೇರಿ-ಹುಬ್ಬಳ್ಳಿ ಮಧ್ಯೆ ಸಂಚರಿಸುವ ರೈಲು ಕುಂದಗೋಳ ರೈಲು ನಿಲ್ದಾಣದಲ್ಲಿ ನಿಂತಿದ್ದು, ಸೋಲಾಪುರ-ಧಾರವಾಡಕ್ಕೆ ತೆರಳುವ ರೈಲು ಹುಬ್ಬಳ್ಳಿ ರೈಲು ನಿಲ್ದಾಣದ ಹೊರಗೆ ನಿಂತಿದೆ, ವಿಜಯವಾಡ ಎಕ್ಸ್ಪ್ರೆಸ್ ಕುಸುಗಲ್ ಬಳಿ ಹಾಗೂ ಜನಶತಾಬ್ದಿ ರೈಲನ್ನು ಕುಂದಗೋಳ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಈ ಘಟನೆಯಿಂದ ಪ್ರಯಾಣಿಕರು ಪರದಾಡುವಂತಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

Facebook Comments

Sri Raghav

Admin