ತಾತನ ಸಾವಿನಿಂದ ನೊಂದ ಮೊಮ್ಮಗ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Hang-Suicide--01

ಮಂಡ್ಯ, ಜು.31- ತಾತನ ಸಾವಿನಿಂದ ನೊಂದಿದ್ದ ಮೊಮ್ಮಗ ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲ್ಲೂಕಿನ ಕೂಳಗೆರೆ ಗ್ರಾಮದ ಸ್ವಾಮಿ ಎಂಬುವವರ ಪುತ್ರ ನಿರಂಜನ್‍ಕುಮಾರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.  ಮಂಡ್ಯ ಎಸ್‍ಪಿ ಎಜುಕೇಶನ್ ನಡೆಸುವ ಮಾಂಡವ್ಯ ಪಿಯು ಎಕ್ಸಲೆನ್ಸ್ ಕಾಲೇಜಿನಲ್ಲಿ ನಿರಂಜನ್‍ಕುಮಾರ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಾ ಕಾಲೇಜು ಆವರಣದಲ್ಲಿಯೇ ಇರುವ ಹಾಸ್ಟೆಲ್‍ನಲ್ಲಿದ್ದನು.

ಇತ್ತೀಚೆಗಷ್ಟೇ ನಿರಂಜನಕುಮಾರ್ ಅವರ ತಾತ ಮೃತಪಟ್ಟಿದ್ದರು. ಅತಿಯಾಗಿ ಪ್ರೀತಿಸುತ್ತಿದ್ದ ತಾತನನ್ನು ಕಳೆದುಕೊಂಡ ದುಃಖದಿಂದ ಈತ ಹೊರ ಬಂದಿರಲಿಲ್ಲ. ಮತ್ತೊಂದೆಡೆ ಕಾಲೇಜಿನಲ್ಲಿ ಟೆಸ್ಟ್ ನಡೆಯುತ್ತಿದ್ದಾಗಲೇ ತಾತ ಮೃತಪಟ್ಟಿದ್ದರಿಂದ ಉತ್ತಮ ಅಂಕ ಪಡೆಯಲು ಸಹ ಸಾಧ್ಯವಾಗದೆ ಮನ ನೊಂದಿದ್ದನು ಎನ್ನಲಾಗಿದೆ.

ರಾತ್ರಿ ಹಾಸ್ಟೆಲ್‍ನಲ್ಲಿದ್ದವರೆಲ್ಲಾ ಊಟಕ್ಕೆ ತೆರಳಿದ್ದಾಗ ಈತ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಗಳು ಊಟ ಮಾಡಿ ರೂಂಗೆ ಬಂದಾಗಲೇ ಈತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin