ಇಂದಿನ ಪಂಚಾಗ ಮತ್ತು ರಾಶಿಫಲ (31-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಣದಲ್ಲಿ ಆಸೆಯಿಲ್ಲ. ಗುಣಗಳನ್ನು  ಸಂಗ್ರಹಿಸುವುದರಲ್ಲಿ ಲೋಭ. ಇತರರ ಕಷ್ಟದಲ್ಲಿ ಮರುಕ. ತಮಗೆ ಸಂಕಟ ಬಂದಾಗ ಧೈರ್ಯ- ಈ ಗುಣಗಳು ಮಹಾತ್ಮರಿಗೆ ಸ್ವಾಭಾವಿಕ .-ಸುಭಾಷಿತರತ್ನಭಾಂಡಾಗಾರ

Rashi
31.07.2018 ಮಂಗಳವಾರ
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ರಾ.09.20 / ಚಂದ್ರ ಅಸ್ತ ಬೆ.08.41
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ತೃತೀಯಾ (ಬೆ.8.44)
ನಕ್ಷತ್ರ: ಶತಭಿಷಾ (ಬೆ.9.10) / ಯೋಗ: ಶೋಭನ (ಮ.2.27)
ಕರಣ: ಭದ್ರೆ-ಭವ (ಬೆ.8.44-ರಾ.9.37) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 16

ಇಂದಿನ ವಿಶೇಷ: ಸಂಕಷ್ಟಹರ ಚತುರ್ಥಿ ಗಣಪತಿ ವ್ರತ

ರಾಶಿ ಭವಿಷ್ಯ : 

ಮೇಷ : ಮಹಿಳೆಯರಿಗೆ ಅನಾವಶ್ಯಕ ಋಣಾತ್ಮಕ ಚಿಂತನೆಗಳು ಕಾಡುವ ಸಂಭವವಿದೆ
ವೃಷಭ : ಆಪ್ತ ಸ್ನೇಹಿತರು ನಿಮ್ಮ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವರು, ಎಚ್ಚರಿಕೆಯಿಂದಿರಿ
ಮಿಥುನ: ಆಕಸ್ಮಿಕ ಧನವ್ಯಯದಿಂದ ಕಾರ್ಯ ಸಿದ್ಧಿಗೆ ಕಿರಿಕಿರಿ ಎನಿಸಿ ಕೊಂಚ ಬೇಸರವೆನಿಸಲಿದೆ
ಕಟಕ : ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಶೀಘ್ರ ವಿವಾಹ ಆಗುವುದು
ಸಿಂಹ: ಉನ್ನತ ಹುದ್ದೆಯ ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿ ವರ್ಗದವರ ಕಿರಿಕಿರಿ
ಕನ್ಯಾ: ಮನೆಯಲ್ಲಿ ಸತ್ಕಾರ್ಯಗಳ ನಿರ್ವಹಣೆ ಜತೆಗೆ ಬೌದ್ಧಿಕ ಕಾರ್ಯಗಳ ಸಂಭ್ರಮ ನಡೆಯಲಿದೆ
ತುಲಾ: ಅಧಾರ್ಮಿಕವಾಗಿ ನಡೆದುಕೊಳ್ಳುವುದರಿಂದ ಪಶ್ಚಾತ್ತಾಪ ಪಡುವಿರಿ
ವೃಶ್ಚಿಕ: ಗೃಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಧನುಸ್ಸು: ಅಧಿಕ ಧನವ್ಯಯವಾದರೂ ಸಮಾಧಾನ ಸಿಗಲಿದೆ
ಮಕರ: ಸಮಾಜ ಸೇವೆಯಲ್ಲಿ ಸಾಧನೆ ಮಾಡುವಿರಿ
ಕುಂಭ: ವಿದ್ಯಾರ್ಥಿಗಳಿಗೆ ಸಾಧಾರಣ ಪ್ರಗತಿ ಇದೆ
ಮೀನ: ಆಕಸ್ಮಿಕ ಉದ್ಯೋಗ ಒದಗಿ ಬರಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin