ರಾಜಕೀಯಕ್ಕೆ ಕಾಗೋಡು ತಿಮ್ಮಪ್ಪ ಗುಡ್ ಬೈ

ಈ ಸುದ್ದಿಯನ್ನು ಶೇರ್ ಮಾಡಿ

kagodu-thimmappa
ಬೆಂಗಳೂರು, ಜು.31-ಚುನಾವಣೆ, ರಾಜಕೀಯ ಸಾಕಾಗಿದ್ದು, ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೂ ವಯಸ್ಸಾಯಿತು. ಇನ್ನು ಮುಂದೆ ಹೋರಾಟ ಮಾಡಲು ಸಾಧ್ಯವಿಲ್ಲ. ಇಷ್ಟು ವರ್ಷಗಳ ಕಾಲ ಜನರ ಪರವಾಗಿ ಹೋರಾಟ ಮಾಡಿದ್ದಾಗಿದೆ. ಹೀಗಾಗಿ ರಾಜಕೀಯದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಹೇಳಿದರು.

ಅವಿವೇಕದ ಪರಮಾವಧಿ:
ಯಾವುದೇ ಕಾರಣಕ್ಕೂ ಅಖಂಡವಾಗಿರುವ ಕರ್ನಾಟಕವನ್ನು ವಿಭಜನೆ ಮಾಡಬಾರದು. ರಾಜ್ಯ ಒಡೆಯುವುದು ಅವಿವೇಕದ ಪರಮಾವಧಿಯಾಗಿದೆ. ಹಲವು ದಶಕಗಳ, ನೂರಾರು ಮಹನೀಯರ ಹೋರಾಟದಿಂದ ಕರ್ನಾಟಕ ಏಕೀಕರಣವಾಗಿದ್ದು, ಅಖಂಡ ಕರ್ನಾಟಕವಾಗಿ ಉಳಿಯಬೇಕು ಎಂದರು.
ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ರಾಜ್ಯ ವಿಭಜನೆಗೆ ಮುಂದಾಗುವುದು ಸರಿಯಲ್ಲ. ಸಚಿವ ಸ್ಥಾನ ಸಿಗದೇ ಇರುವುದಕ್ಕೂ ರಾಜ್ಯದ ಒಡಕಿನ ಬಗ್ಗೆ ಮಾತನಾಡುವುದಕ್ಕೂ ಸಂಬಂಧವಿಲ್ಲ. ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯದ ಬಗ್ಗೆ ಒಡಕಿನ ಮಾತನಾಡಬಾರದು ಎಂದು ಹೇಳಿದರು.

Facebook Comments

Sri Raghav

Admin