ಹಿಮಾಚಲ ಪ್ರದೇಶದಲ್ಲಿ ನಡುರಾತ್ರಿ ನಡುಗಿದ ಭೂಮಿ

ಈ ಸುದ್ದಿಯನ್ನು ಶೇರ್ ಮಾಡಿ

Earthquake

ಶಿಮ್ಲಾ, ಜು.31-ಹಿಮಾಚಲ ಪ್ರದೇಶ ಕಂಗ್ರಾ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಪ್ರದೇಶದಲ್ಲಿ ಈ ವಾರದಲ್ಲಿ ಸಂಭವಿಸಿದ ಮೂರನೇ ಲಘು ಭೂಕಂಪಕವಾಗಿದೆ. ಕಂಗ್ರಾ ಜಿಲ್ಲೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ 1.18ರ ನಸುಕಿನಲ್ಲಿ ಲಘು ಭೂಕಂಪ ಸಂಭವಿಸಿದೆ. ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.
ಭೂಕಂಪದ ಕೇಂದ್ರ ಬಿಂದು ಕಂಗ್ರಾ ಜಿಲ್ಲೆಯ ಭೂಮಿ 10 ಕಿ.ಮೀ.ಆಳದಲ್ಲಿತ್ತು.  ಈ ಮೊದಲು ಜುಲೈ 25 ಮತ್ತು 27ರಂದು ಕಂಗ್ರಾ ಜಿಲ್ಲೆಯಲ್ಲಿ ಅನುಕ್ರಮವಾಗಿ 2.9 ಮತ್ತು 3.8 ತೀವ್ರತೆಯ ಲಘು ಭೂಕಂಪ ಸಂಭವಿಸಿತ್ತು.

Facebook Comments

Sri Raghav

Admin