ಈಕೆ ಪಾರಿವಾಳಗಳ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

ds-3
ನ್ಯೂಯಾರ್ಕ್‍ನ ಕಲಾವಿದೆಯೊಬ್ಬರು ಪಾರಿವಾಳಗಳ ಪೋಷಣೆ ಮೂಲಕ ಗಮನಸೆಳೆದಿದ್ದಾರೆ. ಅವುಗಳಿಗೆ ಆಹಾರ ನೀಡಿ ಉಪಚರಿಸುವ ಇವರನ್ನು ಮದರ್ ಪಿಜನ್ ಎಂದೇ ಅಲ್ಲಿನ ಜನ ಕರೆಯುತ್ತಾರೆ. ಬನ್ನಿ ಪಾರಿವಾಳಗಳ ಮಾತೆಯನ್ನು ಭೇಟಿ ಮಾಡೋಣ.. ಇವರ ಹೆಸರು ಟೀನಾ ಪೀನಾ ಟ್ರಾಚ್‍ಟೆನ್ ಬರ್ಗ್. ಇವರು ವೃತ್ತಿಯಲ್ಲಿ ಕಲಾವಿದರು. ಪ್ರವೃತ್ತಿಯಲ್ಲಿ ಪಾರಿವಾಳ ಪ್ರೇಮಿ. ಅಮೆರಿಕದ ಮುಗಿಲಚುಂಬಿ ನಗರಿ ನ್ಯೂಯಾರ್ಕ್‍ನ ಯೂನಿಯನ್ ಸ್ಕೇರ್ ಪಾರ್ಕ್‍ನಲ್ಲಿ ಇವರು ಪ್ರತಿ ದಿನ ನೂರಾರು ಪಾರಿವಾಳಗಳಿಗೆ ಆಹಾರ ನೀಡಿ ಆರೈಕೆ ಮಾಡುತ್ತಾರೆ. ಇದಕ್ಕಾಗಿಯೇ ನ್ಯೂಯಾರ್ಕ್ ಜನತೆ ಇವರಿಗೆ ಮದರ್ ಪಿಜನ್ ಎಂದೇ ನಾಮಕರಣ ಮಾಡಿದ್ದಾರೆ.ಟೀನಾ ಪಾರಿವಾಳವನ್ನು ಕೇವಲ ಹಕ್ಕಿಯಾಗಿ ಪರಿಗಣಿಸುವುದಿಲ್ಲ. ಇದನ್ನು ಮನುಷ್ಯರಂತೆ ಭಾವಿಸುತ್ತಾರೆ.

ds-4

ಅನೇಕರು ಪಾರಿವಾಳಗಳನ್ನು ರೆಕ್ಕೆ ಇರುವ ಇಲಿಗಳೆಂದೇ ತಿಳಿಯುತ್ತಾರೆ. ಆದರೆ ಇವು ತುಂಬಾ ವಿಶಿಷ್ಟ ಗುಣಗಳ ಪಕ್ಷಿಗಳು. ಮನುಷ್ಯನೊಂದಿಗೆ ನಿಕಟ ಸಂಬಂಧ ಹೊಂದಿರುವ ಹಕ್ಕಿಗಳು ಎಂದು ಬಣ್ಣಿಸುತ್ತಾರೆ ಟೀನಾ.  ಇವರು 1989ರಲ್ಲಿ ಟೆಕ್ಸಾಸ್‍ನ ಸ್ಯಾನ್ ಅಂಟೊನಿಯೋದಿಂದ ನ್ಯೂಯಾರ್ಕ್‍ಗೆ ಬಂದರು. ತಮ್ಮ ಮನೆಯ ತಾರಸಿ ಮೇಲೆ ಪಾರಿವಾಳಗಳ ಗುಂಪುಗಳನ್ನು ನೋಡಿ ಆಕರ್ಷಿತರಾದ ಟೀನಾ ಅವುಗಳಿಗೆ ಆಹಾರ ನೀಡಿ ಉಪಚರಿಸುತ್ತಾ ಆತ್ಮೀಯ ಒಡನಾಟ ಬೆಳೆಸಿಕೊಂಡರು. ಅಷ್ಟೇ ಅಲ್ಲ ಟೀನಾ ಮತ್ತು ಅವರ ಪತಿ ಪಾರಿವಾಳದಂತೆ ಪೋಷಾಕು ಧರಿಸಿ ನಗರದಲ್ಲಿ ಸಂಚರಿಸಿ ಈ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇವು ತುಂಬಾ ಬುದ್ದಿವಂತೆ ಪಕ್ಷಿಗಳು, ಮನುಕುಲದ ಆಪ್ತ ಮಿತ್ರರು, ಇವು ಕೊಳಕು ಮಾಡುತ್ತವೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ ಇವು ನಗರ ತ್ಯಾಜ್ಯವನ್ನು ತಿಂದು ಸ್ವಚ್ಚಗೊಳಿಸುವ ಪರಿಸರ ಸ್ನೇಹಿಗಳಾಗಿವೆ ಎನ್ನುತ್ತಾರೆ ಟೀನಾ.

ಪಾರಿವಾಳಗಳಿಗೆ ಆಹಾರ ನೀಡಲು ಇವರು ಪ್ರತಿ ವಾರ 100 ಪೌಂಡ್‍ಗಳಷ್ಟು ಆಹಾರ ಖರೀದಿಸುತ್ತಾರೆ. ವಾಷಿಂಗ್ಟನ್ ಸ್ಕೇರ್ ಪಾರ್ಕ್, ಯೂನಿಯನ್ ಸ್ಕ್ವೇರ್ ಪಾರ್ಕ್ ಮತ್ತು ವಿವಿಧ ಉದ್ಯಾನವನಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುತ್ತಾರೆ.  ಈ ಪಕ್ಷಿಗಳೂ ಕೂಡ ಇವರೊಂದಿಗೆ ಆತ್ಮೀಯ ಸ್ನೇಹ ಹೊಂದಿವೆ. ಇವರ ಕೈಯಲ್ಲಿರುವ ಆಹಾರವನ್ನು ಯಾವ ಅಂಜಿಕೆಯೂ ಇಲ್ಲದೇ ಸೇವಿಸುವಷ್ಟು ಸಲುಗೆ ಬೆಳೆಸಿಕೊಂಡಿವೆ.

Facebook Comments

Sri Raghav

Admin