ರಷ್ಯಾದಲ್ಲಿ ಜನಪ್ರಿಯವಾಗುತ್ತಿರುವ ಕೆಸರು ಫುಟ್ಬಾಲ್

ಈ ಸುದ್ದಿಯನ್ನು ಶೇರ್ ಮಾಡಿ

ds
ರಷ್ಯಾದಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಈಗಷ್ಟೇ ವರ್ಣರಂಜಿತ ತೆರೆ ಬಿದ್ದಿದೆ. ಅತಿಥೇಯ ರಾಷ್ಟ್ರಕ್ಕೆ ಉತ್ತಮ ಸಾಧನೆ ಮಾಡಲಿಲ್ಲ ಎಂಬ ಬೇಸರ ಕಾಡುತ್ತಿದೆ. ಆದರೆ ರಷ್ಯಾದ ಹವ್ಯಾಸಿ ಫುಟ್ಬಾಲ್ ಆಟಗಾರರು ಈ ನಿರಾಸೆಯನ್ನು ಬದಿಗೊತ್ತಿ ಕೆಸರು ಫುಟ್ಬಾಲ್ ಪಂದ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ds-3

ರಷ್ಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಸರು ಫುಟ್ಬಾಲ್ ಜನಪ್ರಿಯವಾಗುತ್ತಿದೆ. ಫಿಫಾ ವಿಶ್ವಕಪ್ ಫುಟ್ಬಾಲ್‍ಗೆ ಆತಿಥ್ಯ ವಹಿಸಿದ ನಂತರ ದೇಶದ ವಿವಿಧೆಡೆ ಈ ಫುಟ್ಬಾಲ್ ಪ್ರಸಿದ್ಧಿ ಪಡೆಯುತ್ತಿದೆ. ಕೆಸರುಮಯ ಜೌಗು ಪ್ರದೇಶದಲ್ಲಿ ಕಾಲ್ಚೆಂಡಿನ ಆಟವಾಡುವುದೇ ಸ್ವಾಂಪ್ ಸಾಕರ್.  ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ಕ್ರೀಡಾ ಪ್ರೇಮಿಗಳು ಎಂಥ ಪರಿಸ್ಥಿತಿಯಲ್ಲಿಯೂ ಫುಟ್ಬಾಲ್ ಆಡಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ. ಜೌಗು ಪ್ರದೇಶದ ಮೊಣಕಾಲುವರಗೆ ಕೆಸರು ತುಂಬಿದ ಮೈದಾನದಲ್ಲಿ ಕ್ರೀಡಾ ಉತ್ಸಾಹಕರು ಫುಟ್ಬಾಲ್ ಆಡಿ ಗಮನಸೆಳದರು.

ds-1

ಸೇಂಟ್ ಪೀಟರ್ಸ್ ಬರ್ಗ್‍ನಲ್ಲಿ ಪೋಗಿಯಲ್ಲಿ ನಡೆದ ಈ ವರ್ಷದ ಸ್ವಾಂಪ್ ಸಾಕರ್ ಚಾಂಪಿಯನ್‍ಶಿಪ್‍ನಲ್ಲಿ ಒಂಭತ್ತು ತಂಡಗಳು ಭಾಗವಹಿಸಿದ್ದವು. ಕ್ರೀಡಾಂಗಣವು ಮಂಡಿವರೆಗೆ ಕೆಸರು ತುಂಬಿರುವುದರಿಂದ ಆಟಗಾರರು ದೀರ್ಘಾವಧಿ ಕ್ರೀಡೆಯಲ್ಲಿ ಆಯಾಸಗೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಪಂದ್ಯವನ್ನು 20 ನಿಮಿಷಗಳಿಗೆ ಸೀಮಿತಗೊಳಿಸಲಾಗಿತ್ತು.  ಫುಟ್ಬಾಲ್ ಪರಿಶ್ರಮದ ಕ್ರೀಡೆ. ಸಾಮಾನ್ಯ ಮೈದಾನದಲ್ಲಿ ಇದನ್ನು ಆಡುವುದು ಕಷ್ಟ. ಅದರಲ್ಲೂ ಕೆಸರಿನಂಥ ಕೊಳದಲ್ಲಿ ಇದನ್ನು ಆಡುವುದು ಇನ್ನೂ ಕಷ್ಟ.  ಫಿನ್‍ಲೆಂಡ್‍ನಲ್ಲಿ ಜೌಗು ಅಥವಾ ಕೆಸರು ಫುಟ್ಬಾಲ್ ಆಟವನ್ನು ಪರಿಚಯಿಸಲಾಯಿತು. ಕ್ರಾಸ್‍ಕಂಟ್ರಿ ಸ್ಕೀಯಿಂಗ್‍ಗಾಗಿ ಕ್ರೀಡಾಪಟುಗಳ ದೈಹಿಕ ಸಾಮಥ್ರ್ಯ ಹೆಚ್ಚಿಸಲು ತರಬೇತಿ ನೀಡುವ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಯಿತು. ನಂತರ ಬ್ರೆಜಿಲ್‍ನಿಂದ ಚೀನಾವರೆಗೆ ಇದು ವಿಶೇಷ ಕ್ರೀಡೆಯಾಗಿ ಅಭಿವೃದ್ಧಿಗೊಂಡಿದೆ.

ds-4 ds-2

Facebook Comments

Sri Raghav

Admin